ಹೋರಾಟದ ದೊಡ್ಡ ಶಕ್ತಿ ಅಂಬೇಡ್ಕರ್

ದಿ ಡೈಲಿ ನ್ಯೂಸ್ ಮದ್ದೂರು
ಡಾ.ಬಿ.ಆರ್.ಅಂಬೇಡ್ಕರ್ ಅವರು ಜ್ಞಾನ ಮತ್ತು ಹೋರಾಟದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು. ತಾಲೂಕಿನ ಭಾರತೀನಗರದಲ್ಲಿ ಜೈಭೀಮ್ ಸೇವಾಟ್ರಸ್ಟಿನಿಂದ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ನೀಡಿ, ದೇಶದ ಏಕತೆ ಸಮಗ್ರತೆಗೆ ಪೂರಕವಾಗಿ, ಶೋಷಿತರ ಧ್ವನಿಯಾಗಿ, ಮಹಿಳೆಯರ ಪಾಲಿಗೆ ಆಶಾಕಿರಣವಾಗಿ ದೇಶಕ್ಕೆ ಬಹುದೊಡ್ಡ ಸಂವಿಧಾನದವನ್ನು ನೀಡಿದ್ದಾರೆ ಎಂದರು.
ಸಮಾಜ ಸೇವಕ ಎಸ್.ಪಿ.ಸ್ವಾಮಿ ಮಾತನಾಡಿ ಅಂಬೇಡ್ಕರ್ ಅವರು ಬಹುಜನರ ಹಾಗೂ ಭಾರತೀಯರ ಸ್ವತ್ತು. ಅವರ ಹೋರಾಟ ಮತ್ತು ಚಿಂತನೆಗಳಿಂದ ಸೂರ್ಯ-ಚಂದ್ರ ಇರುವರೆಗೂ ಶಾಶ್ವತವಾಗುತ್ತಾರೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸಾಧಕರಿಗೆ ಅಂಬೇಡ್ಕರ್ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿಸಲಾಯಿತು. ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಮದ್ದೂರು ಮಳವಳ್ಳಿಯ ಮುಖ್ಯರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾಮೇಳದಲ್ಲಿ ವಿಜೇತರಿಗೆ ಶ್ರೀನಿಧಿ ಪ್ರತಿಷ್ಠಾನದಿಂದ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕರ್ನಾಟಕ ಯುವಪರಿಷತ್ತಿನ ಅಧ್ಯಕ್ಷ ಕೆ.ಪಿ.ಪ್ರಸನ್ನಕುಮಾರ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಸಿಪಾಯಿ ಶ್ರೀನಿವಾಸ, ಯುವ ಮುಖಂಡರಾಡ ಕರಡಕೆರೆ ಹನುಮಂತೇಗೌಡ, ಉದಯ್ ಚಾರಿಟಬಲ್ ಟ್ರಸ್ಟ್‌ನ ರವಿ, ಮುಖಂಡರಾದ ಚಿದಂಬರಂ ಮೂರ್ತಿ, ಅಮಿನ್ ಶಿವಲಿಂಗಯ್ಯ, ಕರಡಕೆರೆ ಯೋಗೇಶ್, ಸಂತೋಷ್ ತೊರೆಬೊಮ್ಮನಹಳ್ಳಿ, ವಸಂತಮ್ಮ, ದೇವಿರಮ್ಮ, ಸುಂದರಮ್ಮ ಮತ್ತಿತರರಿದ್ದರು.

 

 

The Daily News Media

The Daily News Media