ರೈತರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

ದಿ ಡೈಲಿ ನ್ಯೂಸ್ ರಾಯಚೂರು
ರೈತರ ಬೇಡಿಕೆ ಹಾಗೂ ಹಕ್ಕೊತ್ತಾಯವನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಭಾರತ ದೇಶದ ಶೇ. ೮೦ರಷ್ಟು ಜನರು ಕೃಷಿಯನ್ನೇ ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಏಷ್ಯಾ ಖಂಡದಲ್ಲಿ ಸಮೃದ್ಧವಾದ ಕೃಷಿ ಸಂಪನ್ಮೂಲ ಹೊಂದಿದ ದೇಶ ಭಾರತ ಆದರೆ ಇಂದು ಈ ದೇಶದ ರೈತರ ಕುಟುಂಬಗಳು ಬಡತನದಲ್ಲಿ ಇರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದರು.  ನದಿಗಳ ನೀರಿನ ಮೇಲೆ ತಾರತಮ್ಯ ಧೋರಣೆ, ರೈತ ವಿರೋಧಿ ಕಾನೂನುಗಳು, ಕಳಪೆ ಬೀಜಗಳು ಮುಂತಾದ ಸಂಗತಿಗಳು ರೈತರನ್ನು ಬಡತನದ ಕೂಪಕ್ಕೆ ತಳ್ಳಿವೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್ ಖಾಸಗಿಯವರಿಗೆ ನೀಡಿದ್ದಾರೆ. ಇದರಿಂದ ಭೂಮಿಯನ್ನು ಕಳೆದುಕೊಂಡ ರೈತರಿಗೆ ಇಲ್ಲಿವರೆಗೂ ಪರಿಹಾರ ಸಿಕ್ಕಿಲ್ಲ. ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ನರಸಿಂಹ. ನಾಯಕ್, ಈರಣ್ಣ, ಸಂಗಮೇಶ್. ನಾಯಕ್, ಹನುಮೇಶ, ಶಿವಶರಣಪ್ಪ. ಸೇರಿದಂತೆ ಮತ್ತಿತರರು ಇದ್ದರು.

The Daily News Media

The Daily News Media