ಆರೋಗ್ಯ ಕ್ಷೇಮ ಕೇಂದ್ರ ದಿನಾಚರಣೆ

ಹುಣಸಗಿ: ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ದಿನ ಆಚರಿಸಲಾಯಿತು.  ಆರೋಗ್ಯ ಕ್ಷೇಮ ಅಧಿಕಾರಿ ಮಹಾಂತೇಶ ನಾವಿ ಮಾತನಾಡಿ, ಆಯುಷ್ಮಾನ ಭಾರತದಡಿ ಉಪಕೇಂದ್ರಗಳನ್ನು ಮೇಲ್ದರ್ಜೆಗೆರಿಸಿ ಆರೋಗ್ಯ ಕ್ಷೇಮ ಕೇಂದ್ರಗಳನ್ನಾಗಿ ಮಾಡಿ ನಾಲ್ಕು ವರ್ಷ ಕಳೆದಿವೆ. ಹೀಗಾಗಿ ಈ ದಿನದಂದು ಕೇಂದ್ರ ಸರ್ಕಾರ ಆರೋಗ್ಯ ಕ್ಷೇಮ ಕೇಂದ್ರ ದಿನವೆಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂಜೀವಿನಿ ಕರೆ ಯೋಜನೆಯಲ್ಲಿ ವೈದ್ಯರಿಗೆ ಮೊಬೈಲ್ ಕರೆ ಮೂಲಕವೂ ಚಿಕಿತ್ಸೆ ಪಡೆಯವ ವ್ಯವಸ್ಥೆ ಇದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಕಾರ್ಡ್‌ನಿಂದ ಆರೋಗ್ಯದ ಸೌಲಭ್ಯ ಪಡೆಯಬಹುದಾಗಿದೆ ಅಲ್ಲದೆ ಎಲ್ಲಾ ದಾಖಲಾತಿಗಳು ಒಂದೆಡೆ ಸಂಗ್ರಹವಿರುತ್ತದೆ ಎಂದರು. ಮಲ್ಲಮ್ಮ ಗಡದರ, ಹಣಮಂತ್ರಾಯ, ಹಿರಾಬಾಯಿ, ಶಂಕ್ರಮ್ಮ, ವಿದ್ಯಾವತಿ, ಬಾಳಮ್ಮ, ಚಾಂದಬಿ ನಧಾಪ್ ಸೇರಿದಂತೆ ಗ್ರಾಮಸ್ಥರು ಇದ್ದರು.

The Daily News Media

The Daily News Media