ನಾನಾ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ದಿ ಡೈಲಿ ನ್ಯೂಸ್ ಪಾವಗಡ
ತಾಲೂಕಿನ ಕೆ.ರಾಮಪುರ ಖಾಸಗಿ ಶಾಲಾ ಮುಕ್ತ ಗ್ರಾಮ, ಪಿಂಚಣಿ ಮುಕ್ತ ಗ್ರಾಮವಾಗಿದ್ದು ಸಂತಸ ತಂದಿದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಸಾಕ್ಷರ ಗ್ರಾಮ ಕೆ.ರಾಮಪುರದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದಾ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ದುರಸ್ತಿ, ಖಾತೆ ಬದಲಾವಣೆ, ವಸತಿ ಸೌಲಭ್ಯ, ಯರ್ರಮ್ಮನ ಹಳ್ಳಿ, ಸೂಲನಾಯಕನ ಹಳ್ಳಿ, ಕೆರಾಮಪುರ ಮುಖ್ಯ ರಸ್ತೆಗೆ ಅಭಿವೃದ್ದಿ, ಸ್ಮಶಾನಕ್ಕೆ ಭೂಮಿ ನೀಡುವ ನಾನಾ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಇನ್ಮುಂದೆ ಒಂದೇ ಗ್ರಾಮಕ್ಕೆ ಸೀಮಿತವಾಗದೇ ಕಾರ್ಯಕ್ರಮ ಎಲ್ಲ ಗ್ರಾಮಗಳ ಸಮಸ್ಯೆ ಬಗೆಹರಿಸುವ ಕಾರ್ಯಕ್ರಮ ಆಗಬೇಕು ಎಂದರು. ತಹಸೀಲ್ದಾರ್ ವರದರಾಜು ಮಾತನಾಡಿ, ಈ ಗ್ರಾಮ ಪಿಂಚಣಿ ಮುಕ್ತವಾಗಿದ್ದು, ಗ್ರಾಮದಲ್ಲಿ ಒಟ್ಟಾರೆ ೧೨೨ ಜನಕ್ಕೆ ಸೌಲಭ್ಯ ನೀಡಲಾಗುತ್ತಿದ್ದು, ದೊಡ್ಡಹಳ್ಳಿ, ಚಿಕ್ಕಹಳ್ಳಿ, ನಾಗಲಾಪುರ, ತಿಮ್ಮಮ್ಮನ ಹಳ್ಳಿ, ಯರ್ರಮ್ಮನಹಳ್ಳಿ, ಸೂಲನಾಯಕ ಹಳ್ಳಿ ಗ್ರಾಮಗಳ ೬೫ ಜನತೆಗೆ ಪಿಚಣೆ ಆದೇಶ ಪತ್ರಗಳ ವಿತರಣೆ ಮಾಡಲಾಗುತ್ತಿದೆ ಎಂದರು. ನಿಡಗಲ್ ಹೊಬಳಿಯ ದೇವರಾಯನ ರೊಪ್ಪ ಗ್ರಾಮದಲ್ಲಿ ನೀರಿನಲ್ಲಿ ಮುಳಗಿ ಮೃತಪಟ್ಟ ಮೂವರು ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ಒಂದು ಲಕ್ಷದ ಆದೇಶ ಪತ್ರವನ್ನು ಶಾಸಕರು ಪೋಷಕರಿಗೆ ವಿತರಿಸಿದರು. ಗೊಂಚಲು ಗ್ರಾಮದಲ್ಲಿ ರೈತರಿಗೆ ಕೃಷಿ ಇಲಾಖೆ ವತಿಯಿಂದ ನೀಡುವ ಸ್ಪೇಯರ್‌ಗಳನ್ನು ವಿತರಿಸಲಾಯಿತು.
ಆರೋಗ್ಯ ಇಲಾಖೆಯ ತಿರುಪತ್ತಯ್ಯ, ತಾಪಂ ಎಡಿ ರಂಗನಾಥ್, ಸಿಡಿಪಿಒ ಇಲಾಖೆಯ, ಕೃಷಿ ಇಲಾಖೆಯ ವಿಜಯಮೂರ್ತಿ, ಇಒ ಶಿವರಾಜಯ್ಯ ಮತ್ತಿತರರಿದ್ದರು.

The Daily News Media

The Daily News Media