ರಸಗೊಬ್ಬರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ದಿ ಡೈಲಿ ನ್ಯೂಸ್ ತಿ.ನರಸೀಪುರ
ಸಬ್ ರಿಜಿಸ್ಟರ್ ಕಚೇರಿಯನ್ನು ಮೊದಲನೆ ಅಂತಸ್ತಿಗೆ ಸ್ಥಳಾಂತರ ಮಾಡಬೇಕು,ರೈತರ ಜೊತೆ ಅನುಚಿತ ವರ್ತನೆ ತೋರಿರುವ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಕ್ಷಮೆ ಕೇಳಬೇಕು ಹಾಗೂ ರಸಗೊಬ್ಬರದ ತೊಂದರೆ ಸರಿಪಡಿಸುವಂತೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನೆಡಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ಸಬ್ ರಿಜಿಸ್ಟರ್ ಕಚೇರಿ ಎರಡನೇ ಮಹಡಿಯಲ್ಲಿರುವುದರಿಂದ ವಿಕಲಚೇತನರು ಸೇರಿದಂತೆ ಮೆಟ್ಟಲು ಹತ್ತಿ ಹೋಗಲಾಗದವರಿಗೆ ಸಮಸ್ಯ ಉಂಟಾಗಿದೆ. ಆದ್ದರಿಂದ ಮೊದಲನೆ ಅಂತಸ್ತಿಗೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ್ ಬಿ.ಗಿರೀಜಾ ನಿಮ್ಮ ಬೇಡಿಕೆ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಒಂದು ವಾರದೊಳಗೆ ಬಗೆಹರಿಸುತ್ತೇನೆ ಎಂದುಭರವಸೆ ನೀಡಿದರು.

ಪ್ರತಿಭಟನೆ ಸ್ಥಳಕ್ಕೆ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಿಗೆ ದಂಡಾಧಿಕಾರಿಗಳು ರೈತರ ಜೊತೆ ಸಹನೆಯಿಂದ ವರ್ತಿಸುವಂತೆ ಸೂಚನೆ ನೀಡಿದರು. ಬ್ಯಾಂಕ್ ವ್ಯವಸ್ಥಾಪಕ ಸಹ ರೈತರಲ್ಲಿ ಕ್ಷೆಮೆ ಕೇಳಿದರು ಹಾಗೂ ರಸಗೊಬ್ಬರದ ಸಮಸ್ಯೆ ಬಗ್ಗೆ ಕೃಷಿ ಸಹಾಯಕ ನಿರ್ದೇಶಕರಿಂದ ಮಾಹಿತಿ ಪಡೆದು ಬಗೆಹರಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಅತ್ತಹಳ್ಳಿ ದೇವರಾಜು,ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್, ಗೌರಿಶಂಕರ್ ,ಪ್ರಸಾದ್ ನಾಯಕ, ವೀರೇಶ, ಹಾಡ್ಯ ರವಿ, ಹ್ಯಾಕನೂರು ಬಸವಣ್ಣ, ಹಿರಿಯೂರು ನವೀನ್, ಮಹಿಳಾ ರೈತ ಮುಖಂಡೆ ರೂಪ, ಪಿ.ರಾಜು ಮತ್ತಿತರರು ಹಾಜರಿದ್ದರು.

The Daily News Media

The Daily News Media