ಬಂಡೀಪುರ: ಮೃತಪಟ್ಟ ಹುಲಿ

ದಿ ಡೈಲಿನ್ಯೂಸ್ ಚಾಮರಾಜನಗರ
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ, ಗುಂಡ್ಲುಪೇಟೆ ಉಪವಿಭಾಗದ, ಓಂಕಾರ ವನ್ಯಜೀವಿ ವಲಯದ ಕುರುಬರಹುಂಡಿ ಶಾಖೆ-೨ರ, ಬರಗಿಗಸ್ತಿನ ಆರದೇವನಕಟ್ಟೆ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅಂದಾಜು ೦೬ರಿಂದ೦೭ ವರ್ಷ ವಯಸ್ಸಿನ ಗಂಡು ಹುಲಿಯೊಂದರ ಮೃತದೇಹ ಕಾಣಿಸಿಕೊಂಡಿದೆ.
ಇನ್ನೊಂದು ಹುಲಿಯ ಜೊತೆ ಕಾದಾಟ ನಡೆಸಿ ಮೃತಪಟ್ಟಿದೆ ಎಂದು ತಿಳಿಯಲಾಗಿದೆ. ಸ್ಥಳಕ್ಕೆ ಭಾಅಸೇ ಅರಣ್ಯ ಸಂರPಣಾಧಿಕಾರಿ ಡಾ.ಪಿ.ರಮೇಶ್‌ಕುಮಾರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಮೃತ ಹುಲಿಯ ಎ ಉಗುರುಗಳು, ಹಲ್ಲುಗಳು ಹಾಗೂ ಇತರೆ ಅಂಗಾಗಳು ಸುರಕ್ಷಿತವಾಗಿದ್ದವು. ಇಲಾಖಾ ಪಶುವೈದ್ಯಾಧಿಕಾರಿಗಳಾದ ಡಾ.ವಾಸೀಂ ಮಿರ್ಜಾ ಹುಲಿಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಭಾರತೀಯ ರಾಷ್ಟ್ರೀಯ ಹುಲಿ ಸಂರPಣಾ ಪ್ರ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಮೃತ ಹುಲಿಯ ದೇಹವನ್ನು ಸುಡಲಾಯಿತು.

 

 

The Daily News Media

The Daily News Media