ಬೌದ್ಧ ಧರ್ಮಕ್ಕೆ ಮರುಜೀವ ನೀಡಿದ ಮಹನೀಯರು

ದಿ ಡೈಲಿನ್ಯೂಸ್ ಮಂಡ್ಯ
ಸಮಾನತೆ ಸಾರುವ ಬೌದ್ಧಧರ್ಮಕ್ಕೆ ಪುನರುಜ್ಜೀವನ ನೀಡಿದ ಸಾಮ್ರಾಟ ಅಶೋಕಮೌರ್ಯ ಮತ್ತು ವಿಶ್ವಜ್ಞಾನಿ ಡಾ.ಬಿಆರ್ ಅಂಬೇಡ್ಕರ್ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಾಲ್ಕಿ ಹೇಳಿದರು.
ನಗರದ ಎಸ್ಸಿ-ಎಸ್ಟಿ ನೌಕರರ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಆಯೋಜಿಸಿದ್ದ ಪದಾಧಿಕಾರಿಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಕಂಡ ಸಾಮ್ರಾಟ ಅಶೋಕಮೌರ್ಯನ ಆಡಳಿತ ಕಾಲಾವಧಿಯಲ್ಲಿ ಪ್ರಪಂಚದ ಏಷ್ಯಾಖಂಡವೇ ಬೌದ್ಧಮಯವಾಗಿತ್ತು. ಬುದ್ಧರ ವೈಜ್ಞಾನಿಕ ಚಿಂತನೆಗಳು ಮತ್ತು ಬೌದ್ಧಧರ್ಮದ ಪ್ರಚಾರಕ್ಕಾಗಿ ತನ್ನಿಬ್ಬರ ಮಕ್ಕಳನ್ನೇ ಕಳಿಸಿದ ಬೌದ್ಧದೊರೆಯನ್ನು ಇತಿಹಾಸ ದಾಖಲಿಸಿದೆ. ಭಗವಾನ್ ಬುದ್ಧರ ೮೪ ಸ್ಥೂಪಗಳನ್ನು ನಿರ್ಮಾಣ ಮಾಡಿ, ಏಷ್ಯ ಮತ್ತು ಇತರೆ ದೇಶಗಳಿಗೂ ಧಮ್ಮ ಪ್ರಚಾರ ಮಾಡಿದರು. ಕಳಿಂಗ ಯುದ್ಧದ ನಂತರ ಸಾಮ್ರಾಟ್ ಅಶೋಕ ಮೌರ್ಯ ಧಮ್ಮಪಥದಲ್ಲಿ ಸಾಗಿ ವಿಶ್ವಮಾನ್ಯರಾಗುತ್ತಾರೆ ಎಂದರು.
ಭಾರತೀಯ ಭೌದ್ಧ ಮಹಾಸಭಾ ರಾಜ್ಯ ಕಾರ್ಯದರ್ಶಿ ಶಿವರಾಜ್, ಜಿಲ್ಲಾ ಅಧ್ಯಕ್ಷ ಅನ್ನದಾನಿ, ಕಾರ್ಯದರ್ಶಿ ನಾರಾಯಣಸ್ವಾಮಿ, ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಹಾಸ್, ಅಭಿಯಂತರ ಚಂದ್ರಹಾಸ್, ಮೋಹನ್‌ಕುಮಾರ್ ಇತರಿದ್ದರು.

 

 

The Daily News Media

The Daily News Media