ದೇಗುಲದ ರಥ ಹೆಬ್ಬಾಗಿಲು ಉದ್ಘಾಟನೆ

ಚನ್ನರಾಯಪಟ್ಟಣ : ಚನ್ನರಾಯಪಟ್ಟಣ ತಾಲೂಕಿನ ಬದ್ದೀ ಕೆರೆ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ನೂತನವಾಗಿ ನಿರ್ಮಾಣವಾಗಿರುವ ರಥ ಮತ್ತು ಹೆಬ್ಬಾಗಿಲನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜತ್ತೆನಹಳ್ಳಿ ರಾಮಚಂದ್ರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮಸ್ಥರು ಸೌಹಾರ್ದಯುತವಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾವಿ, ಕಾಂಗ್ರೆಸ್ ಮುಖಂಡರಾದ ದೀಪು, ಕಿರಣ್ ಕಬ್ಬಾಳು, ಮಹೇಶ್ ಹಾಗೂ ಗ್ರಾಮಸ್ಥರಿದ್ದರು.

 

 

The Daily News Media

The Daily News Media