ಮುಸ್ಲಿಂ ವ್ಯಾಪಾರಿಗಳ ನಿರ್ಬಂಧಕ್ಕೆ ದಸಂಸ ವಿರೋಧ

ದಿ ಡೈಲಿ ನ್ಯೂಸ್ ಮೈಸೂರು
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸಿದ್ದು, ಹಳೇ ಪೇಪರ್, ಖಾಲಿ ಬಾಟಲ್ ಕೊಂಡುಕೊಂಡು ನಮಗೆ ಹಣ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ನಿವಾಸದ ಸಮೀಪದ ರಸ್ತೆಗೆ ತ್ಯಾಜ್ಯವಸ್ತುಗಳನ್ನು ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಹಿಂದೂ ಮತಬ್ಯಾಂಕ್ ಸೃಷ್ಟಿಸಲು ಬಿಜೆಪಿ ಮತ್ತು ಸಂಘಪರಿವಾರ ಅಮಾಯಕ ಮುಸಲ್ಮಾನರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುತ್ತಿದೆ. ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ, ಮಸೀದಿ ಮೈಕ್ ಹೆಸರಲ್ಲಿ ಅಶಾಂತಿ ಸೃಷ್ಟಿಸಿದೆ. ಕೋಮು ದ್ವೇಷ ಹುಟ್ಟು ಹಾಕುತ್ತಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದ್ದಾರೆ.
ಪೊಲೀಸರು ಕನ್ನಡ ವೃತ್ತದ ಬಳಿ ಸಾಗುತ್ತಿದ್ದಾಗ ಸಂಸದರ ಮನೆ ಬಳಿಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಪೊಲಿಸರು ತಡೆದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಕೆ.ಆರ್.ಗೋಪಾಲಕೃ?, ಹಿರಿಯ ರಂಗಕರ್ಮಿ ಕೃ?ಪ್ರಸಾದ್, ವರುಣಾ ಮಹೇಶ್, ಚೋರನಹಳ್ಳಿ ಮಹದೇವಸ್ವಾಮಿ, ಬುಗತಹಳ್ಳಿ ದೇವರಾಜು, ಪಡುವಾರಹಳ್ಳಿ ಭಾಗ್ಯಮ್ಮ, ವನಿತಾ, ಬೊಮ್ಮನಹಳ್ಳಿ ಶಂಕರ್, ನಂಜನಗೂಡು ಶಿವಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

The Daily News Media

The Daily News Media