ಮಾತೃವಂದನಾ ಪ್ರಗತಿ ಪರಿಶೀಲನೆ

ದಿ ಡೈಲಿ ನ್ಯೂಸ್ ಯಾದಗಿರಿ
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಮಾರ್ಚ್ ಅಂತ್ಯಕ್ಕೆ ಶೇಕಡಾ ೧೩೫ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ ಯಾದಗಿರಿ ಜಿಲ್ಲೆ ಪ್ರಥಮ ಸ್ಥಾನ ಪ್ರಗತಿ ಸಾಧಸಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಮಾತೃವಂದನಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಯೋಜನೆಯಡಿ ಒಟ್ಟು ೫೫,೫೧೫ ಫಲಾನುಭವಿಗಳು ನೋಂದಣಿಯಾಗಿದ್ದು, ೪೫,೦೩೬ ಗರ್ಭಿಣಿ, ಬಾಣಂತಿಯರು ಸೌಲಭ್ಯ ಪಡೆದಿರುತ್ತಾರೆ. ಯಾದಗಿರಿ ಜಿಲ್ಲೆಗೆ ಒಟ್ಟು ೧೯ ಕೋಟಿ ೯೨ ಲಕ್ಷ ೬೩ ಸಾವಿರ ರೂ. ಸಹಾಯಧನ ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯೋಜನೆಯಡಿ ಮೊದಲ ಗರ್ಭಿಣಿ,ಬಾಣಂತಿಯರಿಗೆ ರೂ.೫೦೦೦ ಸಹಯಧನವನ್ನು ೩ ಕಂತುಗಳಲ್ಲಿ ನೇರವಾಗಿ ಖಾತೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಧೀಶ ಸಾಹಿಲ್ ಅಹ್ಮದ್ ಕುನ್ನಿಭಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಕವಿತಾಳ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ ಎಸ್ ರಾಠೋಡ್, ಡಿಎಚ್‌ಒ ಇಂದುಮತಿ ಪಾಟೀಲ್, ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕ ಯಲ್ಲಪ್ಪ ಕೆ, ಹಾಗೂ ಮತ್ತಿತರಿದ್ದರು.

The Daily News Media

The Daily News Media