ಅಂಬೇಡ್ಕರ್ ಆದರ್ಶವೇ ದಾರಿದೀಪ

ದಿ ಡೈಲಿ ನ್ಯೂಸ್ ಬೆಂಗಳೂರು
ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅವರ ಆದರ್ಶಗಳು ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪ ಎಂದು ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಅಂಬೇಡ್ಕರ್ ಜಯಂತಿ ಅಂಗವಾಗಿ ಕೆಂಗೇರಿಯ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಅವರ ‘ಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಸಂವಿ‘ಾನದಿಂದ ಜನಸಾಮಾನ್ಯರಿಗೆ ಎಲ್ಲಾ ಹಕ್ಕುಗಳು ದೊರಕುತ್ತಿವೆ. ಸಂವಿ‘ಾನ ರಚಿಸಿದರ ಲವಾಗಿ ನಾವು ಶಾಸಕರಾಗಿ, ಸಚಿವರಾಗಲು ಸಾ‘್ಯವಾಯಿತು. ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಶೋಷಿತ ವರ್ಗಗಳ ಸಬಲೀಕರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಯುವಕರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಬಿಜೆಪಿಗೆ ಸೇರ್ಪಡೆ: ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ಕ್ಷೇತ್ರದ ಹಲವೆಡೆ ಮನೆಮನೆ ಪ್ರಚಾರ ನಡೆಸಿದರು. ಈ ಸಂದ‘ರ್ದಲ್ಲಿ ಅನ್ಯಪಕ್ಷದ ನೂರಾರು ಕಾರ್ಯಕರ್ತರು ಎಸ್.ಟಿ.ಸೋಮಶೇಖರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಕಾರ್ಯಕರ್ತರು, ಎಸ್.ಟಿ.ಸೋಮಶೇಖರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ. ಸದಾ ಕ್ಷೇತ್ರದ ಜನತೆಯೊಂದಿಗೆ ಒಡನಾಟ ಹೊಂದಿರುವ ಸೋಮಶೇಖರ್ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

 

The Daily News Media

The Daily News Media