ಯೋ‘, ರೈತರನ್ನು ಸ್ಮರಿಸುವುದು ಅಗತ್ಯ

ದಿ ಡೈಲಿ ನ್ಯೂಸ್ ಸವಣೂರು

ದೇಶ ಕಾಯುವ ಯೋ‘, ದೇಶಕ್ಕೆ ಅನ್ನ ನೀಡುವ ರೈತರನ್ನು ಸ್ಮರಿಸಿದಾಗ ಮಾತ್ರ ಪ್ರತಿಯೊಬ್ಬ ಮನುಷ್ಯನ ಜೀವನ ಸಾರ್ಥಕವಾಗಲು ಸಾ‘್ಯವಾಗಲಿದೆ ಎಂದು ಜೆಸಿಐ ವಲಯ ತರಬೇತುದಾರ ಜೆಸಿ ವಿದ್ಯಾ‘ರ ಕುತನಿ ತಿಳಿಸಿದರು. ಪಟ್ಟಣದ ಹಾವಣಗಿ ಬಡಾವಣೆಯ ನಿವಾಸಿ ವಾಯ್.ವಿ.ಕುತನಿ ಅವರ ನಿವಾಸದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಜರುಗಿದ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಕಾರ್ಯಕ್ರಮದಲ್ಲಿ ದೇಶದ ಗಡಿಬಾಗವನ್ನು ರಕ್ಷಿಸುವಂತ ಯೋ‘ರ ಪತ್ನಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿ ‘ಾಗದಲ್ಲಿ ದೇಶವನ್ನು ಸುರಕ್ಷಿತವಾಗಿ ರಕ್ಷಿಸುವಂತ ಯೋ‘ರ ಕುಟುಂಬವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ಪತ್ನಿಯರ ಕಾರ್ಯ ಶ್ಲಾಘನೀಯವಾಗಿದೆ. ದೇಶದ ಏಳ್ಗೆಗಾಗಿ ನಿಸ್ವಾರ್ಥ ಸೇವೆಯನ್ನು ಮಾಡುವ ಮೂಲಕ ಯಾವುದೇ ಪ್ರಚಾರಕ್ಕೆ ಮುಂದಾಗದೆ ಇರುವಂತ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವಂತ ಕೆಲಸವನ್ನು ಜೆಸಿಐ ಸಂಸ್ಥೇ ಪ್ರತಿ ತಿಂಗಳು ಮಾಡುತ್ತಿವದು ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಶಿಲ್ಪಾ ಹಿರೇಮಠ ಮಾತನಾಡಿ, ದೇಶ ಸೇವೆಯನ್ನು ಮಾಡುತ್ತಿರುವ ಯೋದರ ಬಾಳ ಸಂಗಾತಿಯಾಗಿ ಜೀವನ ನಡೆಸುತ್ತಿರುವದು ನಮ್ಮ ಪೂರ್ವ ಜನ್ಮದ ಪುಣ್ಯ. ಇಂತಹ ಸುಸಂದ‘ರ್ ಯಾರಿಗೆ ಬೇಕಾದರೂ ದೊರೆಯಲು ಸಾ‘್ಯವಿಲ್ಲ. ಪತಿಯ ಜೋತೆಗೆ ಸೇವೆಗೆ ನಮ್ಮನ್ನು ಅಣಿ ಮಾಡಿವರುವದು ನಮ್ಮ ಹೆಮ್ಮೆ. ಪರೋಕ್ಷವಾಗಿ ದೇಶ ಸೇವೆ ಮಾಡಲು ದೈವ ಕೃಪೆ ಕಾರಣವಾಗಿದೆ. ಯೋದರು ಎಂದಾಕ್ಷಣ ಮಗಳನ್ನು ಮದುವೇ ಮಾಡಲು ಪಾಲಕರು ಹಿಂದೇಟು ಹಾಕದೆ ಶು‘ ಕಾರ್ಯಕ್ಕೆ ಮುಂದಾಗಬೇಕು. ಅದೇ ರೀತಿ ಹೆಣ್ಣು ಮಕ್ಕಳು ಮದುವೆಯಾಗಲು ಸಂತೋಷದಿಂದ ಒಪ್ಪಿಗೆ ನೀಡಿ ಗೌರವಯುತ ಜೀವನ ನಡೆಸಲು ಮುಂದಾಗಬೇಕು ಎಂದರು. ಕಾರ್ಯಕ್ರಮದ ಅ‘್ಯಕ್ಷತೆಯನ್ನು ಜೆಸಿಐ ನಮ್ಮ ಸವಣೂರು ಘಟಕದ ಅ‘್ಯಕ್ಷ ಜೆಸಿ ಬಾಪೂಗೌಡ ಕೊಪ್ಪದ ವಹಿಸಿ ಮಾತನಾಡಿದರು.
ಯೋದರ ಪತ್ನಿಯರಾದ ಪ್ರೀಯದರ್ಶಿನಿ ಬಂಡಾರಿ, ಸುಲೋಚನಾ ಚಾಕಲಬ್ಬಿ, ಶಿಲ್ಪಾ ಹೊಸಮಠ, ಮಲ್ಲಮ್ಮ ಲಮಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

The Daily News Media

The Daily News Media