ಸಂವಿ‘ನ ಪುಸ್ತಕದಲ್ಲಿ ಐಎಎಸ್, ಐಪಿಎಸ್ ಮಾಹಿತಿ

ದಿ ಡೈಲಿ ನ್ಯೂಸ್ ಕೋಲಾರ : ಡಾ. ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿ‘ನ ಪುಸ್ತಕದಲ್ಲಿ ಮಾತ್ರ ಐಎಎಸ್, ಐಪಿಎಸ್ ಬಗ್ಗೆ ಮಾಹಿತಿ ಇರೋದು, ಬೇರೆ ಯಾವ ಪುಸ್ತಕದಲ್ಲೂ ಸಹಾ ಇಲ್ಲ ಎಂದು ಜಿ ಪೊಲೀಸ್ ವರಿಷ್ಠಾಽಕಾರಿ ಡಿ. ದೇವರಾಜ್ ತಿಳಿಸಿದರು.
ಅವರು ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವತಿಯಿಂದ ಸಂವಿ‘ನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ ಪರಿನಿರ್ವಾಣದ ಅಂಗವಾಗಿ ಆಯೋಜಿಸಿದ್ದ ಉಚಿತ ಅರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಡಿ ವಿಶ್ವವೇ ತಿರುಗಿ ನೋಡುವಂತ ಒಂದು ಉತ್ತಮ ಸಂವಿ‘ನವನ್ನು ಅಂಬೇಡ್ಕರ್ ಅವರು ರಚನೆ ಮಾಡಿzರೆ. ಬ್ರಿಟಿಷ್ ಆಡಳಿತದ ನಂತರ ದೇಶ ವಿ‘ಜನೆಯಾಗಿ ದೇಶದ ಪರಿಸ್ಥಿತಿ ಹದಗೆಟ್ಟಿತ್ತು. ಅಂತಹ ಸಮಯದಲ್ಲಿ ದೇಶದ ಹಿತವನ್ನು ಬಯಸಿ ಎ ಜನಸಾಮಾನ್ಯರಿಗೂ ಅನುಕೂಲವಾಗುವಂತ ಮತ್ತು ಸಮಾನತೆ ನ್ಯಾಯ ಸಿಗುವಂತ ಸಂವಿ‘ನ ರಚನೆ ಮಾಡಿರುವುದು ಪ್ರಜಾಪ್ರ‘ತ್ವಕ್ಕೆ ಬುನಾದಿ ಹಾಕಿದಂತಿದೆ ಎಂದರು.
ಪ್ರತಿಯೊಬ್ಬರು ಸಹ ಸಂವಿ‘ನ ಪುಸ್ತಕವನ್ನು ಓದಿ. ನಿಮ್ಮ ಮನೆಯಲ್ಲಿನ ಮಕ್ಕಳಿಗೆ ಸಂವಿ‘ನ ಮತ್ತು ಜ್ಞಾನ ಉತ್ತೇಜಿಸುವ ಇತರೆ ಪುಸ್ತಕ ಓದುವ ಹವ್ಯಾಸ ಬೆಳೆಸಿ. ಯಾವುದೇ ಒಂದು ಪುಸ್ತಕವನ್ನು ಓದುವುದರಿಂದ ಮಕ್ಕಳಲ್ಲಿ eನ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ನೋಡಿದರು ಬ್ಯಾನರ್. ಇದರ ಬದಲು ಸ್ವಲ್ಪ ಹಣದಲ್ಲಿ ನಿಮ್ಮ ಸಮೀಪದ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡಿಸಿ ನಿಮ್ಮಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಜಿ.ಎನ್. ನಾಗರಾಜ್ ಅವರು ಜಾತಿ ಎಂಬ ಪದ ಹೇಗೆ ಬಂತು, ರಾಜ್ಯದಲ್ಲಿ ಜಾತಿ ಎನ್ನುವುದು ಯಾವಾಗ ಸೃಷ್ಟಿಯಾಯಿತು, ಅದರಲ್ಲಿ ಆ ಜಾತಿ ಈ ಜಾತಿ ಎಂಬ ‘ದದ ಮೂಲ, ಜಾತಿ ವಿಚಾರಕ್ಕೆ ಸಂಬಂ‘ಪಟ್ಟ ಅನೇಕ ವಿಚಾರಗಳ ಕುರಿತು ಉಪನ್ಯಾಸ ನೀಡಿದರು.
ಪ್ರಕಾಶ, ಗೊಲ್ಲಹಳ್ಳಿ ಶಿವಪ್ರಸಾದ, ಮೃತ್ಯುಂಜಯ, ಗುರು ಲಿಂಗಯ್ಯ, ಸುರೇಶ, ಶಫಿವು ಮತ್ತು ಕೋಲಾರ ಜಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಸಿಬ್ಬಂದಿ ಇತರರಿದ್ದರು.

The Daily News Media

The Daily News Media