ಸೂಕ್ತ ತಳಿ ಆಯ್ಕೆಯಿಂದ ಹೆಚ್ಚಿನ ಇಳುವರಿ

ಹನುಮಂತನ ಪಾಳ್ಯದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕೃಷಿ ಜಾತ್ರೆಯಲ್ಲಿ ಮಾಜಿ ಶಾಸಕ ಸು‘ಕರ್ ಲಾಲ್ ಅಭಿಮತ
ದಿ ಡೈಲಿ ನ್ಯೂಸ್ ಕೊರಟಗೆರೆ
ರೈತರು ಕದ್ರಿ ಲೇಪಾಕ್ಷಿ ಶೇಂಗಾ ಬೆಳೆದರೆ ಒಳ್ಳೆಯ ಇಳುವರಿ ಬರುವುದಲ್ಲದೇ, ಅದಕ್ಕೆ ಯಾವ ರೋಗವೂ ಬರುವುದಿಲ್ಲ. ರೈತರು ಯಾವ ಸಂದ‘ದಲ್ಲಿ ಯಾವ ತಳಿಯನ್ನು ನಾಟಿ ಮಾಡಬೇಕು, ಹಾರೈಕೆ ಹೇಗೆ ಮಾಡಿದರೆ ಉತ್ತಮ ಸಲು ಪಡೆಯಬಹುದು ಎಂಬುದನ್ನು ಸರ್ಕಾರ ಮಾರ್ಗದರ್ಶನ ಮಾಡಬೇಕು ಎಂದು ಮಾಜಿ ಶಾಸಕ ಸು‘ಕರ್ ಲಾಲ್ ಹೇಳಿದರು.
ತಾಲೂಕಿನ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಹನುಮಂತನ ಪಾಳ್ಯದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕೃಷಿ ಜಾತ್ರೆಯಲ್ಲಿ ಅವರು ಮಾತನಾಡಿದರು.
ವೀರ‘ದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿ ರೈತ ಕುಟುಂಬಕ್ಕೆ ನಮ್ಮ ಸಿದ್ಧರಬೆಟ್ಟದ ರೋಟರಿ ಕಾಮ‘ನು ವತಿಯಿಂದ ಒಂದೊಂದು ಕುಟುಂಬಕ್ಕೂ ೩೦,೦೦೦ ರೂ. ಸಹಾಯ‘ನವನ್ನು ನೀಡುತ್ತೇವೆ. ಲಾನು‘ವಿಗಳು ರೋಟರಿ ಕಾಮ‘ನು ಸಂಸ್ಥೆಗೆ ಪ್ರತಿ ತಿಂಗಳು ೧,೦೦೦ ರೂ.ನಂತೆ ೩೦ ತಿಂಗಳು ಕಟ್ಟಬೇಕು. ಇದು ಬಡ ರೈತರಿಗೆ ಅನುಕೂಲವಾಗಲೆಂದು ತೆಗೆದುಕೊಂಡಿರುವ ತೀರ್ಮಾನ. ತೆಗೆದುಕೊಂಡಿದ್ದೇವೆ.
ರೈತರು ಕ್ವಿಂಟಲ್ ರಾಗಿ ಬೆಳೆಯಲು ೩,೦೦೦ದಿಂದ ೩,೨೦೦ ರೂ. ಖರ್ಚಾಗುತ್ತದೆ. ಆದರೆ ಸರ್ಕಾರ ನಿಗದಿ ಮಾಡಿರುವುದು ೨,೬೦೦ರಿಂದ ೨,೮೦೦. ಇದರಿಂದ ರೈತನಿಗೆ ಲಾ‘ಕ್ಕಿಂತ ನಷ್ಟವೇ ಹೆಚ್ಚು. ಅಲ್ಲದೇ, ಸರ್ಕಾರಕ್ಕೆ ಮಾರಾಟ ಮಾಡಿದ ೬-೮ ತಿಂಗಳ ನಂತರ ರೈತನ ಖಾತೆಗೆ ಹಣ ಬರುತ್ತದೆ. ಇದರಿಂದ ರೈತ ಬದುಕುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದರು.
ಹನುಮಂತನಾಥ ಸ್ವಾಮೀಜಿ ಮಾತನಾಡಿ, ರೈತರ ಬೆಳೆಗೆ ನ್ಯಾಯವಾಗಿ ಬೆಲೆ ಸಿಗದ ಕಾರಣ ಯಾವ ರೈತನೂ ತನ್ನ ಮಕ್ಕಳಿಗೆ ರೈತನಾಗಿರು ಎನ್ನುವುದಿಲ್ಲ. ಮಕ್ಕಳನ್ನು ಪಟ್ಟಣದ ಕಡೆ ಮುಖ ಮಾಡಿಸುತ್ತಾರೆ. ಯಾವುದಾದರೂ ಖಾಸಗಿ ಕಂಪನಿಯಲ್ಲಿ ದುಡಿದು ಬದುಕಲಿ ಎನ್ನುತ್ತಾರೆ. ರೈತರ ಈ ಸ್ಥಿತಿಗೆ ಸರ್ಕಾರವೇ ಕಾರಣ ಎಂದರು.
ಜಿಕೆವಿಕೆ ವತಿಯಿಂದ ಗ್ರಾಮೀಣ ಪ್ರದೇಶದ ರೈತರಿಗೆ ಬೆಳೆಗಳನ್ನು ಹೇಗೆ ಬೆಳೆಯಬೇಕು, ಹೇಗೆ ಉಪಚರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರು.
ಉದ್ಯಮಿ ನೀಲೇಶ್, ಎಸ್ವಿ ಸುರೇಶ್ ಉಪ ಕುಲಪತಿ, ಡೀನ್ ಕೃಷಿ ಎನ್.ಬಿ.ಪ್ರಕಾಶ್, ಶಿವಲಿಂಗಯ್ಯ ರಾವೆ ಸಂಯೋಜಕರು, ಸವಿತಾ ಶಿಬಿರಽಕಾರಿ, ಜಿಪಂ ಸದಸ್ಯ ಶಿವರಾಮಯ್ಯ, ತಾಪಂ ಮಾಜಿ ಸದಸ್ಯ ಬೋರಣ್ಣ, ಹನುಮಂತರಾಯಪ್ಪ, ಅ‘ಕ್ಷೆ ಪಿ. ಗಂಗಾದೇವಿ, ಸದಸ್ಯರಾದ ರಂಗಣ್ಣ, ಗೀತಾ ನರಸಿಂಹರಾಜು, ಹನುಮಂತರಾಯಪ್ಪ, ಜಯಣ್ಣ , ಗೋವಿಂದರಾಜು, ನರಸಿಂಹರಾಜು, ನಾಗರಾಜು, ಲೋಕೇಶ್, ಜಿಕೆವಿಕೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

The Daily News Media

The Daily News Media