ದ್ವೀಪದ ರಸ್ತೆ ಪಕ್ಕದಲ್ಲಿ ಗಿಡ ನೆಡುಲು ಒತ್ತಾಯ

ದಿ ಡೈಲಿ ನ್ಯೂಸ್ ಕೋಲಾರ
ನಗರದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ದ್ವೀಪದ ರಸ್ತೆಗಳ ಎರಡೂ ಬದಿಯಲ್ಲಿ ಗಿಡ ನೆಡುವಂತೆ ಒತ್ತಾಯಿಸಿ ನಮ್ಮ ಕೋಲಾರ ರೈತ ಸಂಘವು ಉಪ ಅರಣ್ಯ ಸಂರಕ್ಷಣಾಽಕಾರಿಗಳಿಗೆ ಮನವಿ ಸಲ್ಲಿಸಿತು. ನಗರದ ಸಂಗಂಡಹಳ್ಳಿ ಬಳಿಯ ಮೇಲುಸೇತುವೆಯಿಂದ ಬೈರೇಗೌಡ ನಗರದ ಮೇಲುಸೇತುವೆವರೆಗೂ ಜೋಡಿ ದ್ವೀಪದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಅದೇ ಪ್ರಕಾರ ಕೊಂಡರಾಜನಹಳ್ಳಿಯಿಂದ ಜಿಲ್ಲಾಡಳಿತ ‘ವನದ ಕುಂಬಾರ ಹಳ್ಳಿಯವರಗೆ ಬೈಪಾಸ್ ರಿಂಗ್‌ರೋಡ್ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗಳ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ಬೆಳೆದಿದ್ದ ನೂರಾರು ವ?ಗಳ ಹಳೆಯ ಬೃಹದಾಕಾರದ ಮರಗಳನ್ನು ಕಡಿಯಲಾಗಿದೆ. ಆ ರೀತಿ ಕಡಿದ ಮರಗಳ ಸ್ಥಾನದಲ್ಲಿ ಪರ್ಯಾಯವಾಗಿ ಯಾವುದೇ ಮರಗಳನ್ನು ಬೆಳೆಸುವ ಪ್ರಯತ್ನಗಳು ಆಗಿಲ್ಲ. ಇದರ ಪರಿಣಾಮವಾಗಿ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಉತ್ತಮ ವಾಯು ಸಿಗದಂತೆ ಆಗಿದೆ, ಜೊತೆಗೆ ದಾರಿಹೋಕರಿಗೆ ಬಿಸಿಲಿನ ತಾಪಕ್ಕೆ ನೆರಳು ಸಿಗದಂತಾಗಿದೆ. ಆದಕಾರಣ ಈ ಮೇಲ್ಕಂಡ ಎರಡೂ ರಸ್ತೆಗಳ ಇಕ್ಕೆಲದಲ್ಲೂ ಮರಗಳನ್ನು ಇಲಾಖೆಯಿಂದ ನೆಟ್ಟು ಬೆಳೆಸಿದ್ದಲ್ಲಿ ಉತ್ತಮ ಪರಿಸರ ಹಾಗೂ ಸ್ವಚ್ಛ ಗಾಳಿ ಸಿಗುತ್ತದೆ ಎಂದು ಮನವಿ ಮಾಡಿದ್ದಾರೆ. ಸಂಸ್ಥಾಪಕ ರಾಜ್ಯಾ‘ಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ, ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ರಾಜ್ಯ ಗೌರವಾ‘ಕ್ಷ ಕೆ.ಸಿ.ಪಿ.ನಾಗರಾಜ್, ಜಿಲ್ಲಾ‘ಕ್ಷ ಶಿವಕುಮಾರ್ ಕೆ.ವಿ., ಕೆಂಬೋಡಿ ಕೃ?ಗೌಡ, ಜಿಲ್ಲಾ ಉಪಾ‘ಕ್ಷ ವಿಶ್ವನಾಥಗೌಡ, ಕಾಮ‘ನಹಳ್ಳಿ ವೆಂಕಟಾಚಲಪತಿ, ಅಬ್ಬಣಿ ಮುನೇಗೌಡ, ಮುಳಬಾಗಿಲು ರವೀಂದ್ರರೆಡ್ಡಿ, ಕೆ.ಎಚ್. ಮಂಜುನಾಥ್, ವೆಂಕಟಮುನಿರೆಡ್ಡಿ, ಬಿ.ಎ.ಚಲಪತಿ, ತಮ್ಮೇಗೌಡ, ಮಾರ್ಜೇನಹಳ್ಳಿ ನಾರಾಯಣಸ್ವಾಮಿ ಮುಂತಾದವರಿದ್ದರು.

The Daily News Media

The Daily News Media