ಪೋಷಣ್ ಮಾಸಾಚರಣೆ

ಮುಂಡಗೋಡ: ಹೆಣ್ಣು ಮತ್ತು ಗಂಡು ಮಕ್ಕಳಿಗೆ ಹದಿಹರೆಯದ ಸಮಯದಲ್ಲಿ ದೇಹದಲ್ಲಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಂದೆ ತಾಯಿಗಳು ಅರಿತುಕೊಂಡು ಆ ಸಮಸ್ಯೆಗಳ ಬಗ್ಗೆ ವೈದ್ಯರ ಬಳಿ ಪರಿಹಾರ ಕೊಡಿಸಬೇಕು ಎಂದು ಜಿಲ್ಲಾ ಸಂಯೋಜಕರಾದ ವಿಕ್ಷಿತಾ ಶೆಟ್ಟಿ ಹೇಳಿದರು.
ಶುಕ್ರವಾರ ತಾಲೂಕಿನ ಚವಡಳ್ಳಿ ಗ್ರಾಪಂನಲ್ಲಿ ಎಸ್.ಬಿ.ಸಿ.ಸಿ. ಕಾರ್ಯಕ್ರಮದಡಿ ಆಯೋಜಿಸಲಾದ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಂಗಸರು ಗುಪ್ತ ಸಮಸ್ಯೆಗಳ ಬಗ್ಗೆ ಮುಚ್ಚಿಟ್ಟುಕೊಳ್ಳದೆ ಸಂಬಂ‘ಪಟ್ಟ ವ್ಯದ್ಯರ ಬಳಿ ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮನುಷ್ಯನು ಆರೋಗ್ಯವಂತರಾಗಿರಲು ಯೋಗ ವ್ಯಾಯಾಮ ಮಾಡುವುದರ ಜೊತೆಗೆ ಯಾವ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಆಹಾರವನ್ನು ನಿಯಮಿತವಾಗಿ ಪ್ರಮಾಣಬದ್ಧವಾಗಿ ಸೇವಿಸಬೇಕು ಎಂಬುವುದರ ಬಗ್ಗೆ ತಿಳಿಸಿದರು.
ಚವಡಳ್ಳಿ ಗ್ರಾಪಂ ಅ‘ಕ್ಷ ಮಂಜುನಾಥ ಕಟಗಿ, ಸದಸ್ಯೆ ನೇತ್ರಾವತಿ ಬಿಸಗಣ್ಣನವರ, ಸದಸ್ಯ ಲೋಕಪ್ಪ ಕೋಣನಕೇರಿ, ಸುನೀಲ್ ರಾಠೋಡ, ಪರ್ತಕರ್ತ ವೈ.ಪಿ.‘ಜಂಗಿ, ಪಾಂಡುರಂಗ ‘ದ್ರಾಪುರ, ಗ್ರಾ.ಪಂ ಅಭಿವೃದ್ಧಿ ಅಽಕಾರಿ ಗಣಪತಿ ಪಿಲ್ಲೋಜಿ ಇದ್ದರು.

The Daily News Media

The Daily News Media