ಮೋದಿ ಜನ್ಮದಿನ: ಸೇವಾ ಪಾಕ್ಷಿಕ

ದಿ ಡೈಲಿ ನ್ಯೂಸ್ ಹೊಸಪೇಟೆ
ಪ್ರ‘ನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಸೆ. ೧೭ರಂದು ಇದ್ದು, ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅನಂತಪದ್ಮನಾ‘ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅ‘ಕ್ಷ ಜೆ.ಪಿ ನಡ್ಡಾ ಅವರ ಸೂಚನೆಯ ಮೇರೆಗೆ ಈ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಬಡವರ, ಕಾರ್ಮಿಕರ, ರೈತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದ ಮೋದಿ ಅವರು ದೀರ್ಘಾಯುಷ್ಯಕ್ಕಾಗಿ ಈ ಬಾರಿ ಸೇವಾ ಪಾಕ್ಷಕಿ ಹಮ್ಮಿಕೊಳ್ಳಲಾಗಿದೆ. ೮ ವರ್ಷಗಳ ಕಾಲ ದೇಶದ ಅತ್ಯುತ್ತಮ ಪ್ರ‘ನಿಯಾಗಿ ಹಾಗೂ ೧೨ ವರ್ಷಗಳ ಕಾಲ ಗುಜರಾತ್ ಸಿಎಂ ಆಗಿ ಅವರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಬಾರಿ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಬಿಜೆಪಿ ವತಿಯಿಂದ ವಿವಿ‘ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ. ೧೭ರಿಂದ ಆರಂ‘ವಾಗುವ ಸೇವಾ ಚಟುವಟಿಕೆಗಳು ಅ. ೨ರ ಗಾಂಽಜಿ ಮತ್ತು ಲಾಲ ಬಹಾದ್ದೂರ ಶಾಸಿಜಿ ಅವರ ಜಯಂತಿವರೆಗೆ ನಡೆಯಲಿವೆ. ಸೆ. ೨೫ರಂದು ಬಿಜೆಪಿ ಸಂಸ್ಥಾಪಕರಾದ ಪಂಡಿತ್ ದೀನ ದಯಾಳ ಉಪಾ‘ಯರ ಜಯಂತಿ ಸಹ ಇದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಿಂದ ರಕ್ತದಾನ ಶಿಬಿರಗಳು ನಡೆಯಲಿವೆ. ಇದಲ್ಲದೆ ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡೆಣೆ ಶಿಬಿರ ಇರಲಿದೆ. ಸೆ. ೧೮ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು, ಸ್ವಚ್ಛತಾ ದಿನ ಸಹ ಹಮ್ಮಿಕೊಳ್ಳಲಾಗಿ ಎಂದು ವಿವರಿಸಿದರು.
ಜಿಲ್ಲಾ ಮಾ‘ಮ ಸಂಚಾಲಕ ಸತ್ಯನಾರಾಯಣ, ಜಿಲ್ಲಾ ಮಾ‘ಮ ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಹೊಸಪೇಟೆ ಬಿಜೆಪಿ ಮಂಡಲ ಅ‘ಕ್ಷ ಕಾಸಿಟ್ಟಿ ಉಮಾಪತಿ, ಮಂಡಲ ಮಾ‘ಮ ಸಂಚಾಲಕಿ ಅನುರಾ‘ ಇದ್ದರು.

The Daily News Media

The Daily News Media