ಇಂದಿರಾ ಕ್ಯಾಂಟೀನ್ ಸ್ಥಗಿತ

ದಿ ಡೈಲಿ ನ್ಯೂಸ್ ಬೇಲೂರು: ನೌಕರರಿಗೆ ವೇತನ ನೀಡದ ಕಾರಣಕ್ಕೆ ನೌಕರರು ಕೆಲಸಕ್ಕೆ ಬಾರದ್ದರಿಂದ ಇಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ಗುರುವಾದ ಆಹಾರ ವಿತರಣೆ ಸ್ಥಗಿತಗೊಳಿಸಲಾಗಿತ್ತು.
ಕ್ಯಾಂಟೀನ್‌ನಲ್ಲಿ ಸೂಪರ್ ವೈಸರ್ ಸೇರಿದಂತೆ ಒಟ್ಟು 6 ಜನ ನೌಕರರಿದ್ದು 5 ತಿಂಗಳವರೆಗೆ ವೇತನ ಪಾವತಿಸದ ಕಾರಣ ಸೂಪರ್ ವೈಸರ್ ಹೊರತುಪಡಿಸಿ ಉಳಿದ ನೌಕರರು ಕೆಲಸಕ್ಕೆ ಗೈರಾಗಿದ್ದರು. ಇದರಿಂದಾಗಿ ತಿಂಡಿ, ಊಟದ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಕ್ಯಾಂಟೀನ್‌ಗೆ ಬಂದಂತ ಗ್ರಾಹಕರಿಗೆ ತಿಂಡಿ ಖಾಲಿಯಾಗಿದೆ ಎಂದು ಸಬೂಬು ಹೇಳಿ ಕಳುಹಿಸುತ್ತಿರುವುದು ಹಾಗೂ ಗ್ರಾಹಕರು ತಿಂಡಿ ಇಲ್ಲದೆ ವಾಪಸ್ಸು ಆಗುತ್ತಿದ್ದುದು ಕಂಡುಬಂತು.
ಕ್ಯಾಂಟೀನ್ ಒಳಗೆ ಯಾವುದೇ ರೀತಿ ಪಡಿತರ, ಗ್ಯಾಸ್ ಸಿಲಿಂಡರ್ ಇರುವುದು ಕಂಡು ಬರಲಿಲ್ಲ. ಈ ಬಗ್ಗೆ ಸೂಪರ್‌ವೈಸರ್ ಅವರನ್ನು ಪ್ರಶ್ನಿಸಿದಾಗ, ನನ್ನನ್ನು ಏನೂ ಕೇಳಬೇಡಿ ಎಂದು ಮಾಹಿತಿ ನೀಡಲು ನಿರಾಕರಿಸಿದರು.
ಈ ಸಂದ‘ರ್ ಮಾತನಾಡಿದ ಗ್ರಾಹಕ ರಂಜಿತ್, ಇಂದಿರಾ ಕ್ಯಾಂಟೀನ್ ಎಂದರೆ ಬಡವರಿಗೆ ಅನುಕೂಲ ಆಗಲಿ ಎಂಬುದು. ಹಳ್ಳಿಗಾಡಿನಿಂದ ಬರುವ ಸಾಕಷ್ಟು ವಿದ್ಯಾರ್ಥಿಗಳು ಈ ಕ್ಯಾಂಟೀನ್ ನಂಬಿಕೊಂಡು ಬರುವುದಿದೆ, ಹಳ್ಳಿಗಳ ಜನರು ಬರುತ್ತಾರೆ. ಆದರೆ ಇಲ್ಲಿ ವ್ಯವಸ್ಥೆ ಸರಿ ಇಲ್ಲ. ನೌಕರರಿಗೆ ವೇತನ ನೀಡದಿದ್ದರೆ ಅವರು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೆಲವರು ವೇತನ ಪಡೆಯದೆ ಕೆಲಸ ಬಿಟ್ಟು ಹೋಗಿರುವುದು ಇದೆ. ಗುತ್ತಿಗೆ ಪಡೆದಿರುವ ವ್ಯಕ್ತಿ ಇಲ್ಲಿಗೆ ಬರುವುದೇ ಅಪರೂಪ. ಬಾಕಿ ವೇತನ ಪಾವತಿ ಆಗದೆ ನೌಕರರು ಬೇಸತ್ತು ಕೆಲಸ ಬಿಡುತ್ತಾರೆ. ಅಂತಹ ನೌಕರರ ವೇತನ ಗುತ್ತಿಗೆದಾರನ ಪಾಲಾಗುತ್ತದೆ. ಇದು ಆತನ ಹವ್ಯಾಸವಾಗಿದೆ. ಇಂದು ಕ್ಯಾಂಟೀನ್ ಮುಚ್ಚಲು ಗುತ್ತಿಗೆದಾರನೇ ಕಾರಣನಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

The Daily News Media

The Daily News Media