ತಂಬಾಕು ದುಷ್ಪರಿಣಾಮದ ಅರಿವು ಅಗತ್ಯ

ದಿ ಡೈಲಿ ನ್ಯೂಸ್ ಚಿಕ್ಕಬಳ್ಳಾಪುರ
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ, ತಂಬಾಕು ಸೇವನೆ ತ್ಯಜಿಸಿ, ಇತರರಲ್ಲೂ ಜಾಗೃತಿ ಮೂಡಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಽಶರು ಮತ್ತು ಕಾನೂನು ಸೇವಾ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹೇಳಿದರು.
ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಕೋಶದಿಂದ ತಂಬಾಕು ಪರಿಸರಕ್ಕೆ ಮಾರಕ ಎಂಬ ಘೋಷ ವಾಕ್ಯದೊಂದಿಗೆಯೊಂದಿಗೆ ನಗರ ಹೊರವಲಯದ ಕೆ.ವಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಂಬಾಕು ಸೇವನೆ ಅತ್ಯಂತ ಅಪಾಯಕಾರಿ ನಮ್ಮ ಪ್ರಾಣಕ್ಕೆ ಕುತ್ತು ಬರುವುದಲ್ಲದೆ ನಮ್ಮ ನೆರೆಹೊರೆಯವರಿಗೂ ಇದರಿಂದ ತೊಂದರೆ ಉಂಟಾಗಲಿದೆ ಮಾತ್ರವಲ್ಲ, ಅಂಗಾಂಗ ವೈಲ್ಯದಿಂದಲೂ ಬಳಲಬೇಕಾಗುತ್ತದೆ. ತಂಬಾಕು ಸೇವನೆ ನಿಲ್ಲಿಸದೇ ಹೋದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಾಗಲಿದೆ ಹಾಗೂ ತಂಬಾಕು ಸೇವನೆ ತ್ಯಜಿಸುವ ಮಾರ್ಗೋಪಾಯ ಕಂಡುಕೊಂಡು ಇತರರಿಗೆ ಜಾಗೃತಿ ಮೂಡಿಸಿ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಇಂದಿರಾ ಆರ್ ಕಬಾಡೆ ಮಾತನಾಡಿ, ತಂಬಾಕು ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಪ್ರಮುಖವಾಗಿ ಇದು ಹೃದಯ ರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದುರ್ಬಲ ಲವತ್ತತೆ, ವಿವಿ‘ ರೀತಿಯ ಕ್ಯಾನ್ಸರ್ ಸೇರಿದಂತೆ ವಿವಿ‘ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

ದಂತ ಶಸಚಿಕಿತ್ಸಕಿ ಡಾ. ಮಂಜುಳ ಮಾತನಾಡಿ, ಹದಿಹರೆಯದವರು ಹೆಚ್ಚಾಗಿ ತಂಬಾಕು ವ್ಯಸನಕ್ಕೆ ತುತ್ತಾಗಿ ಬಾಯಿ ಕ್ಯಾನ್ಸರ್, ಗ್ಯಾಂಗ್ರಿನ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಂತಹ, ಹಲವಾರು ರೀತಿಯ ಕಾಯಿಲೆಗಳು ಬರುತ್ತಿದ್ದು, ಪ್ರತಿ ದಿನ ನಮ್ಮ ಬಳಿಗೆ ೪ ರಿಂದ ೫ ಜನ ಬಾಯಿಹುಣ್ಣಿನಂತಹ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ತಂಬಾಕು ತ್ಯಜಿಸಲು ಇಚ್ಛಿಸುವವರು ಜಿಲ್ಲಾ ಆಸ್ಪತ್ರೆ ಕೊಠಡಿ ಸಂಖ್ಯೆ ೧೫೬ ರಲ್ಲಿ ಉಚಿತ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ ಹಾಗೂ ನಿಕೋಟಿನ್ ಗಮ್ಸ್ ಚಿಕಿತ್ಸೆಯನ್ನು ನೀಡುತ್ತಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ಐಟಿಐ ಕಾಲೇಜಿನ ಪ್ರಾಂಶುಪಾಲ ಹನುಮಂತರೆಡ್ಡಿ ಅ‘ಕ್ಷತೆ ವಹಿಸಿದ್ದರು. ಜಿಲ್ಲಾ ಶಸ ಚಿಕಿತ್ಸಕರಾದ ಡಾ.ರುದ್ರಮೂರ್ತಿ, ತಾಲೂಕು ಆರೋಗ್ಯಾಽಕಾರಿ ಡಾ. ಮಂಜುಳಾ, ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ‘ಗವಹಿಸಿದ್ದರು.

The Daily News Media

The Daily News Media