ಅರಕೆರೆ ಗ್ರಾಪಂಗೆ ಉಪಾಧ್ಯಕ್ಷೆ ಶಿಲ್ಪಾ ರಾಜಣ್ಣ

ದಿ ಡೈಲಿ ನ್ಯೂಸ್ ಯಲಹಂಕ
ಅರಕೆರೆ ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಸುರಧೇನುಪುರ ಗ್ರಾಮದ ಶಿಲ್ಪಾ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರಕೆರೆ ಗ್ರಾಪಂನಲ್ಲಿ ಒಟ್ಟು 22 ಸದಸ್ಯರಿದ್ದು, ಇತ್ತೀಚೆಗೆ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಗೌಡ ಆಯ್ಕೆಯಾಗಿದ್ದರು. ಉಪಾಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಸುರಧೇನುಪುರ ಗ್ರಾಮದ ಶಿಲ್ಪ ರಾಜಣ್ಣ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಉಪಾಧ್ಯಕ್ಷೆ ಶಿಲ್ಪಾ ರಾಜಣ್ಣನನ್ನು ಬಿಡಿಎ ಅಧ್ಯಕ್ಷ, ಶಾಸಕ ಎಸ್ ಆರ್ ವಿಶ್ವನಾಥ್, ಗ್ರಾಪಂಅಧ್ಯಕ್ಷ ಲಕ್ಷ್ಮೀನಾರಾಯಣ ಗೌಡ ಮತ್ತು ಸದಸ್ಯರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು.
ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಬಿ. ಹನುಮಯ್ಯ, ಬೆಂ.ಉತ್ತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರಕೆರೆ ವಸಂತ್ ಗೌಡ, ಮುಖಂಡರಾದ ಈಶ್ವರಾಚಾರ್, ಅರಸೇಗೌಡ, ಮುನಿಕೃಷ್ಣಪ್ಪ, ರಾಜಣ್ಣ, ಪರಶುರಾಮ್, ಸಾದೇನಹಳ್ಳಿ ಚಿಕ್ಕಣ್ಣ, ಗ್ರಾ.ಪಂ.ಸದಸ್ಯರಾದ ಮಂಜುಳಮ್ಮ, ರಾಮೇಲಪ್ಪ, ಪವನ್ ಕುಮಾರ್, ಎಸ್ ಮಂಜುನಾಥ್, ಅರಸೇಗೌಡ, ಚಿಕ್ಕಮುನಿಯಪ್ಪ, ಸೇರಿದಂತೆ ಇನ್ನಿತರರಿದ್ದರು.

The Daily News Media

The Daily News Media