ದಲಿತರ ಏಳ್ಗೆಗೆ ಒಳಮೀಸಲು ಜಾರಿ

ಯಶವಂತಪುರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಣ್ಣನೆ

ದಿ ಡೈಲಿ ನ್ಯೂಸ್ ಬೆಂಗಳೂರು
ಅಂಬೇಡ್ಕರ್ ಜಂಯಂತಿ ಅಂಗವಾಗಿ ಯಶವಂತರಪುರದ ಸಂವಿ‘ಾನ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ಶಾಸಕ ಹಾಗೂ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶುಕ್ರವಾರ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಬಳಿಕ ಸಮೀಪದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರವು ದಲಿತರ ಏಳ್ಗೆಯ ಗುರಿಯೊಂದಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದು, ಒಳಮೀಸಲಾತಿಯನ್ನೂ ಜಾರಿಗೆ ತಂದಿದೆ. ಇಂತಹ ಇಚ್ಛಾಶಕ್ತಿಯನ್ನು ಕಾಂಗ್ರೆಸ್ಸಾಗಲಿ, ಜೆಡಿಎಸ್ ಆಗಲಿ ಪ್ರದರ್ಶಿಸಿಲ್ಲ. ಒಳಮೀಸಲಾತಿಯನ್ನು ಕೊಡಲು ಆ ಪಕ್ಷಗಳಿಗೆ ‘ಯವಿತ್ತು. ಈ ಮೂಲಕ ಬಿಜೆಪಿ ಸರ್ಕಾರವು ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಮೀಸಲಾತಿ ಪರಿಷ್ಕರಣೆ ಮತ್ತು ಒಳಮೀಸಲಾತಿ ಎರಡನ್ನೂ ಜನಸಂಖ್ಯೆಯ ಪ್ರಮಾಣವನ್ನು ಆ‘ರಿಸಿ ಜಾರಿಗೊಳಿಸಲಾಗಿದೆ. ಇದಕ್ಕೆ ಯಾವುದೇ ತೊಡಕಾಗದಂತೆ 9ನೇ ಷೆಡ್ಯೂಲ್‌ಗೆ ಸೇರಿಸಲಾಗುತ್ತಿದೆ. ಇದರಿಂದ ದಲಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳ ಪ್ರಯೋಜನ ಸಿಗಲಿದೆ. ಇದನ್ನು ಕಂಡು ಪ್ರತಿಪಕ್ಷಗಳಿಗೆ ನಡುಕ ಉಂಟಾಗಿದ್ದು, ಅವು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ನಮ್ಮ ಸರ್ಕಾರವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ಶೇ. 24ರಷ್ಟು ಮೀಸಲಾತಿ ಕೊಟ್ಟಿದೆ ಎಂದರು. ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೂ ಸೂಕ್ತ ಮೀಸಲಾತಿ ಕೊಡಲಾಗಿದೆ. ಇದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ದೇಶದಲ್ಲಿ ಇಂದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಜನಪರವಾಗಿ ಕೆಲಸ ಮಾಡುತ್ತಿದ್ದರೆ ಅದರ ಹಿಂದೆ ಸಂವಿ‘ಾನದ ಜನಕರಾದ ಅಂಬೇಡ್ಕರ್ ಅವರೇ ಮೂಲಕಾರಣರಾಗಿದ್ದಾರೆ. ಅವರ ದೂರದರ್ಶಿತ್ವದಿಂದಾಗಿ 140 ಕೋಟಿ ದೇಶವಾಸಿಗಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಜತೆಗೆ ರಾಜ್ಯದಲ್ಲಿ ಅವರು ‘ೇಟಿ ನೀಡಿದ್ದ 10 ಸ್ಥಳಗಳನ್ನು ಪುಣ್ಯಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಜತೆಗೆ ಬಿಜೆಪಿ ಸರ್ಕಾರವು ಪೌರಕಾರ್ಮಿಕರ ಉದ್ಯೋಗವನ್ನು ಖಾಯಂ ಮಾಡಿದೆ. ಅವರಿಗೆ ಘನತೆ ತಂದುಕೊಡುವ ಆಶಯದಿಂದ ವಿ‘ಾನಸೌ‘ದ ಸಮೀಪದಲ್ಲೇ ’ಶ್ರಮಿಕರ ‘ವನ’ವನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ದಲಿತರ ಪರವಾಗಿ ಪಿಟಿಸಿಎಲ್ ಮತ್ತು ದೌರ್ಜನ್ಯ ತಡೆ ಕಾಯ್ದೆಗಳನ್ನು ಶಕ್ತಿಯುತಗೊಳಿಸಲಾಗಿದೆ. ಯಶವಂತಪುರ ಮತ್ತು ಮತ್ತೀಕೆರೆಗಳಲ್ಲಿ ದಲಿತ ಸಮುದಾಯದ ಬಂ‘ುಗಳಿಗೆ ಸಮರ್ಪಕ ಸೌಲ‘್ಯಗಳನ್ನು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಸುರೇಶ್ ಗೌಡ, ಜೈಪಾಲ್, ಕಾವೇರಿ ಕೇದಾರನಾಥ ಮುಂತಾದವರು ಉಪಸ್ಥಿತರಿದ್ದರು.

 

 

 

The Daily News Media

The Daily News Media