ಕ್ರೀಡೆ ಜೀವನದ ‘ಾಗವಾಗಲಿ: ಕೆ.ಸಿ. ವೀರಣ್ಣ

ದಿ ಡೈಲಿ ನ್ಯೂಸ್ ಬೀದರ್
ಕ್ರೀಡೆ ದೈನಂದಿನ ಜೀವನದ ‘ಾಗವಾಗಬೇಕು ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ವೀರಣ್ಣ ಹೇಳಿದರು.
ನಗರದ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಅವಶ್ಯ. ಕ್ರೀಡೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಶಾಲೆಯಲ್ಲಿ ಸುಂದರ ಕ್ರೀಡಾಂಗಣ ನಿರ್ಮಿಸಿರುವುದು ಶ್ಲಾಘನೀಯ ಎಂದು ಹೇಳಿದರು. ನಿರಂತರ ೌಂಡೇಷನ್ ಅ‘್ಯಕ್ಷರೂ ಆದ ಶಾಲೆಯ ಸಂಸ್ಥಾಪಕ ನಿರಂಜನ ಶೀಲವಂತ ಮಾತನಾಡಿ, ಶಾಲೆಯಲ್ಲಿ ಕ್ರೀಡೆಗಾಗಿಯೇ ವಿಶೇಷ ಪಠ್ಯಕ್ರಮ ಇದೆ. ಕ್ರೀಡಾ ಪ್ರತಿ‘ೆ ಆ‘ರಿಸಿ, ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ನೆದರ್‌ಲ್ಯಾಂಡ್ ದೇಶದ ರೋಲಾಂಡ್ ಬೋರ್ಕಲ್, ಡಾ. ಎಚ್.ಬಿ. ‘ರಶೆಟ್ಟಿ ಮಾತನಾಡಿದರು. ವಿವಿ‘ ಸ್ಪರ್‘ೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪದಕ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಶಾಲೆಯ ಸಂಯೋಜಕಿ ಲಕ್ಷ್ಮಿ ಮುಗಳಿ, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಹಾಗೂ ಪಾಲಕರು ಹಾಜರಿದ್ದರು.

 

The Daily News Media

The Daily News Media