ಗುಲ್ಬರ್ಗ ವಿವಿ ಸಂಶೋ‘ನಾ ವ್ಯಾಪ್ತಿ ವಿಸ್ತಾರ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಉಪಕುಲಪತಿ ಪ್ರೊ.ದಯಾನಂದ ಅಗಸರ ಅಭಿಮತ
ದಿ ಡೈಲಿ ನ್ಯೂಸ್ ಕಲಬುರಗಿ
ಗುಲ್ಬರ್ಗ ವಿಶ್ವವಿದ್ಯಾಲಯ ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ನೂತನ ಶಿಕ್ಷಣ ನೀತಿಯಡಿ ತನ್ನ ಸಂಶೋ‘ನಾ ವ್ಯಾಪ್ತಿಯ ವಿಸ್ತಾರಕ್ಕೆ ಮುಂದಾಗಿದೆ ಎಂದು ಉಪಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದರು. ಇಲ್ಲಿನ ರಾ‘ಾಕೃಷ್ಣ ಸ‘ಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗುಲ್ಬರ್ಗ ವಿವಿಯ ಮಹಾತ್ಮಾ ಗಾಂಧಿ ಸ‘ಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಪ್ರಮುಖ ‘ಾಷಣಕಾರರಾಗಿ ಪಾಲ್ಗೊಂಡಿರುವ ಹೈದರಾಬಾದಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆ್ ಕೆಮಿಕಲ್ ಟೆಕ್ನಾಲಜಿಯ ಮುಖ್ಯ ವಿಜ್ಞಾನಿ ಡಾ.ಎಚ್.ಎಂ.ಸಂಪತಕುಮಾರ್ ಅವರು ಗುಲ್ಬರ್ಗ ವಿವಿಯ ಹಳೆಯ ವಿದ್ಯಾರ್ಥಿ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಡಾ.ಸಂಪತಕುಮಾರ್ ಅವರು ರಾಸಾಯನಿಕ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಿರಿಯ ವಿಜ್ಞಾನಿಯಾಗಿದ್ದು, ಇತ್ತೀಚೆಗೆ ಕೋವಿಡ್ ಕ್ಷೋ‘ೆ ವೇಳೆ ಜೀವರಕ್ಷಕ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಸಂಪತ್ ಅವರ ಕೊಡುಗೆ ಸಾಕಷ್ಟಿದೆ ಎಂದರು. ಮ‘ುಮೇಹ ಗಾಯ ಉಪಶಮನಕ್ಕೆ ಸಂಶೋ‘ನೆ: ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿ‘ಾಗದ ಮುಖ್ಯಸ್ಥರಾಗಿರುವ ಪ್ರೊ.ಜಿ.ಎನ್.ವಿದ್ಯಾಸಾಗರ ಹಾಗೂ ಬ್ರಿಟನ್ ದೇಶದ ಯೂನಿವರ್ಸಿಟಿ ಆ್ ಬ್ರಾಡ್‌ೆರ್ಡ್ ಪ್ರಾ‘್ಯಾಪಕ ಡಾ.ಎಸ್.ಎ.ಬೆಹರೂಸ್ ಖಗಾನಿ ಅವರು ಜಂಟಿಯಾಗಿ ಮ‘ುಮೇಹದ ಗಾಯದ ಉಪಶಮನಕ್ಕೆ ಸಸ್ಯಮೂಲದ ಚಿಕಿತ್ಸೆ ಅಭಿವೃದ್ಧಿಪಡಿಸಿದ್ದಾರೆ. ಈ ಪೈಕಿ ಪ್ರೊ.ವಿದ್ಯಾಸಾಗರ್ ಸಸ್ಯಮೂಲದ ಔಷಧಿ ಸಂಶೋಧಿಸಿದ್ದು, ಪ್ರೊ.ಖಗಾನಿ ನ್ಯಾನೊ ತಂತ್ರಜ್ಞಾನ ಬಳಕೆಯೊಂದಿಗೆ ನ್ಯಾನೊ-ಪದರ ಅಭಿವೃದ್ಧಿಪಡಿಸಿದ್ದಾರೆ. ಈ ಔಷ‘ವನ್ನು ಮ‘ುಮೇಹಿಗಳನ್ನು ಹೆಚ್ಚು ದಿನಗಳ ಕಾಲ ಕಾಡುವ ಗಾಯದ ಮೇಲೆ ಬ್ಯಾಂಡೇಜ್ ಬಳಸಿ ಅಳವಡಿಸುವುದರಿಂದ ಗಾಯ ಕೊಳೆಯಲು ಅವಕಾಶವಿಲ್ಲದೆ ಉಪಶಮನಗೊಳ್ಳಲಿದೆ ಎಂದು ವಿವರಿಸಿದರು.
ಇನ್ನು, ಈ ನಿಟ್ಟಿನಲ್ಲಿ ಬರುವ ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವೊಂದನ್ನು ಹಮ್ಮಿಕೊಳ್ಳಲಾಗುತ್ತಿದೆ. ಮತ್ತೊಂದೆಡೆ, ಸಂಶೋ‘ನಾ ವಿನಿಮಯ ಯೋಜನೆಯ ಅಡಿಯಲ್ಲಿ ಪ್ರೊ.ವಿದ್ಯಾಸಾಗರ್ ಅವರು ಮೂರು ತಿಂಗಳು ಬ್ರಾಡ್‌ೆರ್ಡ್ ವಿವಿಯಲ್ಲಿ ಹಾಗೂ ಡಾ.ಖಗಾನಿ ಮೂರು ತಿಂಗಳು ಗುಲ್ಬರ್ಗ ವಿವಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದರು.
ಕುಲಸಚಿವ ಡಾ.ಬಿ.ಶರಣಪ್ಪ, ಪ್ರೊ. ಲಿಂಗಪ್ಪ ಇತರರಿದ್ದರು.

The Daily News Media

The Daily News Media