ಶಿಕ್ಷಣ, ಸ್ಥಳೀಯ ಸಂಸ್ಥೆ ಉನ್ನತೀಕರಣಕ್ಕೆ ಆದ್ಯತೆ

ವಿಜಯನಗರ ಕ್ಷೇತ್ರದಲ್ಲಿ 294.04 ಕೋಟಿ ರೂ. ವೆಚ್ಚದ 241 ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಶಂಕುಸ್ಥಾಪನೆ
ದಿ ಡೈಲಿ ನ್ಯೂಸ್ ಹೊಸಪೇಟೆ
ವಿಜಯನಗರ ವಿ‘ಾನಸ‘ಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ, ಸ್ಥಳೀಯ ಸಂಸ್ಥೆಗಳ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ವಿಜಯನಗರ ವಿ‘ಾನಸ‘ಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿ‘ ಇಲಾಖೆಗಳ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ಸುಮಾರು 294.04 ಕೋಟಿ ರೂ. ವೆಚ್ಚದ ಒಟ್ಟು 241 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೆಡಿಕಲ್, ನರ್ಸಿಂಗ್, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಸಣ್ಣ ಕೈಗಾರಿಕೆ ಕ್ಲಸ್ಟರ್ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತದೆ.
ಸಮ್ಮಿಶ್ರ ಸರ್ಕಾರ, ಕೋವಿಡ್ ಸಂದ‘ರ್ ಹೊರತುಪಡಿಸಿ ಉಳಿದ 18 ತಿಂಗಳ ಅವಧಿಯಲ್ಲಿಯೇ ವಿಜಯನಗರ ಜಿಲ್ಲೆ ಸ್ಥಾಪನೆ ಸೇರಿದಂತೆ ವಿವಿ‘ ಇಲಾಖೆಗಳ ಮೂಲಕ ಸಾವಿರ ಕೋಟಿ ರೂ. ವರೆಗೆ ಅನುದಾನವನ್ನು ಒದಗಿಸಿ, ಜಿಲ್ಲೆಯ ಮತ್ತು ವಿ‘ಾನಸ‘ಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿನ ಸೌಲ‘್ಯ ಸೇರಿದಂತೆ, ಕೃಷಿಗೆ ಏತನೀರಾವರಿ ಹಾಗೂ ವಿವಿ‘ ಅಗತ್ಯ ಸೌಲ‘್ಯಗಳನ್ನು ಒದಗಿಸಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮಾತನಾಡಿ, ನೂತನ ಜಿಲ್ಲೆಯಾಗಿ ಘೋಷಣೆಯಾದ ನಂತರ ಅತಿ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯನಗರ ಅಗ್ರಗಣ್ಯವಾಗಿದೆ ಎಂದರು. ಸಂಸದ ವೈ.ದೇವೇಂದ್ರಪ್ಪ, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್, ಜಿ.ಪಂ. ಸಿಇಒ ಸದಾಶಿವ ಪ್ರ‘ು ಬಿ, ಉಪವಿ‘ಾಗಾಧಿಕಾರಿ ಸಿದ್ಧರಾಮೇಶ್ವರ, ನಗರಸ‘ೆ ಅ‘್ಯಕ್ಷೆ ಸುಂಕಮ್ಮ, ಉಪಾ‘್ಯಕ್ಷ ಆನಂದ್, ನಗರಾಭಿವೃದ್ಧಿ ಪ್ರಾಧಿಕಾರ ಅ‘್ಯಕ್ಷ ಅಶೋಕ್ ಜೀರೆ, ಕಮಲಾಪುರ ಪುರಸ‘ೆ ಅ‘್ಯಕ್ಷ ಸೈಯದ್ ಅಮಾನುಲ್ಲಾ ಸೇರಿದಂತೆ ಪುರಸ‘ೆ, ನಗರಸ‘ೆ ಸದಸ್ಯರು, ಹಂಪಿ, ಬುಕ್ಕಸಾಗರ ಹಾಗೂ ಬೈಲುವದ್ದಿಗೇರಿ ಗ್ರಾ.ಪಂ.ಅ‘್ಯಕ್ಷರು, ಉಪಾ‘್ಯಕ್ಷರು, ವಿವಿ‘ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

The Daily News Media

The Daily News Media