ಬಿ.ಇಡಿ ಪ್ರವೇಶ ದಾಖಲೆ ಪರಿಶೀಲನೆಗೆ ಅಸ್ತು

ದಿ ಡೈಲಿ ನ್ಯೂಸ್ ಕಲಬುರಗಿ
2022-23ನೇ ಸಾಲಿನ ಬಿ.ಇಡಿ ಕೋರ್ಸ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಸಿದ್ದು, ಕೊನೆಯ ದಿನಾಂಕದ ನಂತರ ಲಿತಾಂಶ ಬಂದಿರುವ ಅ‘್ಯರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ದಾಖಲಾತಿಗೆ ಪರಿಗಣಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಪ್ರ‘ಾನ ಕಾರ್ಯದರ್ಶಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ಪತ್ರ ಬರೆದಿದ್ದಾರೆ.
ಮೂರು ಸುತ್ತಿನ ದಾಖಲಾತಿ ಪರಿಶೀಲನೆ ಮುಗಿದಿರುತ್ತದೆ. ಆದರೂ ತಡವಾಗಿ ಲಿತಾಂಶ ಕೆಲವು ವಿವಿಗಳಿಂದ ಬಂದಿರುವುದರಿಂದ ವಿದ್ಯಾರ್ಥಿಗಳ ‘ವಿಷ್ಯದ ದೃಷ್ಟಿಯಿಂದ ಷರತ್ತಿಗೊಳಪಟ್ಟು 4ನೇ ಸುತ್ತಿನ ಕೌನ್ಸೆಲಿಂಗ್ ಮತ್ತು ತದನಂತರ ಮಾಪ್ ಅಪ್ ರೌಂಡ್ ಮಾಡುವ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳನ್ನು ದಾಖಲಾತಿ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ.
ಈ ಕುರಿತಾಗಿ ಜ. 27,2023ರಂದು ಗುಲ್ಬರ್ಗ ವಿವಿ ಪರೀಕ್ಷಾ ಲಿತಾಂಶದ ವಿಳಂಬ ನೀತಿಯಿಂದ ‘‘ಬಿ.ಇಡಿ ಪ್ರವೇಶ ಪ್ರಕ್ರಿಯೆಯಿಂದ ಹೊರಗುಳಿದ ವಿದ್ಯಾರ್ಥಿಗಳು ಯಾರ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ’’ ಎನ್ನುವ ತಲೆ ಬರಹದ ಅಡಿಯಲ್ಲಿ ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

The Daily News Media

The Daily News Media