‘ರೆಗುರುಳಿದ ರಥ: ತಪ್ಪಿದ ಅನಾಹುತ

ದಿ ಡೈಲಿ ನ್ಯೂಸ್ ಚಾಮರಾಜನಗರ
ತಾಲೂಕಿನ ಚೆನ್ನಪ್ಪನಪುರ ಬಳಿಯ ಗುಡ್ಡದ ಶ್ರೀವೀರ‘ದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ರಥೋತ್ಸವ ವೇಳೆ ಚಕ್ರ ಮುರಿದು ರಥ ಉರುಳಿಬಿದ್ದ ಘಟನೆ ನಡೆದಿದೆ.
ರಥೋತ್ಸವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ‘ಗವಹಿಸಿದ್ದರು. ತೇರು ಎಳೆಯಲು ಚಾಲನೆ ನೀಡುತ್ತಿದ್ದಂತೆ ‘ಕ್ತರು ಜಯಘೋಷದೊಂದಿಗೆ ತೇರು ಎಳೆಯಲು ಆರಂಭಿಸಿದಾಗ ತೇರಿನ ಮೇಲ್ಬಾಗ ದೇವಸ್ಥಾನದ ಗೋಪುರ ಕಡೆ ವಾಲಿದೆ. ಇದನ್ನು ಸರಿಪಡಿಸಲು ಮುಂದಾದ ವೇಳೆ ತೇರನ್ನು ಜೋರಾಗಿ ಎಳೆಯಲಾಗಿದೆ. ಪರಿಣಾಮ ತೇರಿನ ಒಂದು ಚಕ್ರ ಮುರಿದ ಪರಿಣಾಮ ತೇರು ಉರುಳಿ ಬಿದ್ದಿದೆ. ಈ ವೇಳೆ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ‘ಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂ‘ವಿಸಿಲ್ಲ. ಘಟನೆಯಿಂದ ರಥೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾವಿರಾರು ‘ಕ್ತರು ಬೆಚ್ಚಿ ಬಿದ್ದಿದ್ದಾರೆ. ಆದರೆ, ದೇವರ ಕೃಪೆಯಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ರಥ ಹಳೆಯದಾಗಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ.

The Daily News Media

The Daily News Media