ಶಿಕ್ಷಣದಿಂದ ನಾಗರಿಕ ಸಮಾಜ ಸೃಷ್ಟಿ

ದಿ ಡೈಲಿ ನ್ಯೂಸ್ ಪಾವಗಡ: ಶಿಕ್ಷಣದ ಮೂಲಕ ಉತ್ತಮ ನಾಗರಿಕ ಸಮಾಜ ರೂಪಿಸುವಲ್ಲಿ ಗುರುವಿನ ಪಾತ್ರ ಪ್ರಮುಖವಾಗಿದೆ ಎಂದು ರಾಮಕೃಷ್ಣ ಸೇವಾಶ್ರಮದ ಅ‘್ಯಕ್ಷ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಎಸ್.ಎಸ್.ಕೆ ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಡಾ.ಸರ್ವಪಲ್ಲಿ ರಾ‘ಕೃಷ್ಣನ್ ಜಯಂತಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂ‘ದಲ್ಲಿ ಅವರು ಮಾತನಾಡಿದರು.
ಪಾವಗಡ ತಾಲೂಕಿನಂತಹ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಲವು ಸಮಸ್ಯೆಗಳ ನಡೆವೆಯೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಿಗೆ ಕೇವಲ ‘ೋದನೆ ಮಾಡುವುದೇ ಶಿಕ್ಷಣವಲ್ಲ, ಬದಲಿಗೆ ಅವರಲ್ಲಿರುವ ಪ್ರತಿ‘ೆಯನ್ನು ಗುರುತಿಸಿ ಉತ್ತಮ ವ್ಯಕ್ತಿತ್ವ, ರಾಷ್ಟ್ರ ಪ್ರೇಮ, ನಾಗರಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ ಎದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ, ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮಕ್ಕಳಲ್ಲಿ ಉತ್ತಮ ‘ವುಷ್ಯ ರೂಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ. ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಕಟ್ಟಡಗಳ ಮಾಾಹಿತಿ ಪಡೆದು ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಸೋಲಾರ್ ಸಿ.ಎಸ್.ಆರ್ ನಿಧಿಯಲ್ಲಿ ತಾಲೂಕಿನ 250 ಶಾಲೆಗಳಿಗೆ ್ಯಾನ್ ಮತ್ತು ಲೈಟ್ ಅಳವಡಿಸಲಾಗಿದೆ, ಕುಡಿವ ನೀರು, ಶೌಚಾಲಯಗಳಂತಹ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯಾಗಿ ಹೊಸ ಪ್ರತಿ‘ೆಗಳು ಹೊರಬಂದರೆ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣದ ಗುರು‘ವನದಿಂದ ಎಸ್.ಎಸ್.ಕೆ ಸಮುದಾಯ ‘ವನದವರೆಗೂ ಸರ್ವಪಲ್ಲಿ ರಾ‘ಾಕೃಷ್ಣನ್ ‘ಾವ ಚಿತ್ರ ಮೆರೆವಣಿಗೆ ಮಾಡಲಾಗಿತು. ಇದೇ ವೇಳೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು, ನಿವೃತ್ತ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಗಿತು, ವಿವಿ‘ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗಿತು.
ಮಾದರಿ ಶಾಲೆ: ತಾಲೂಕಿನ ಕೆ.ರಾಂಪುರ ಸರ್ಕಾರಿ ಶಾಲೆಯಲ್ಲಿ ನೀಡುತ್ತಿರುವ ಶಿಕ್ಷಣದಿಂದಾಗಿ ಇಡೀ ರಾಜ್ಯಕ್ಕೇ ಮಾದರಿಯಾಗಿದೆ. ಗ್ರಾಮದ ಜನರ ಸಹಕಾರದಿಂದಾಗಿ ಈಗಲೂ ಯಾರೊಬ್ಬರೂ ಖಾಸಗಿ ಶಾಲೆಗೆ ಹೋಗೋದಿಲ್ಲ ಎಂದು ಶಾಸಕ ವೆಂಕಟರಮಣಪ್ಪ ಶ್ಲಾಘಿಸಿದರು.ಉಪ ನಿರ್ದೇಶಕ ಕೆ.ಜಿ.ರಂಗಯ್ಯ, ಉಪನ್ಯಾಸಕ ಗೋವಿಂದರಾಜು, ಡಯಟ್ ಪ್ರಾಂಶುಪಾಲ ವೈ.ಎನ್ ರಾಮಕೃಷ್ಣಯ್ಯ, ತಾಪಂ ಇಒ ಶಿವರಾಜಯ್ಯ, ಬಿಇಒ ಅಶ್ವತ್ಥನಾರಾಯಣ, ಸಮಾಜಸೇವಕ ನೇರಳೆಕುಂಟೆ ನಾಗೇಂದ್ರ ಕುಮಾರ್, ಡಿವೈಪಿಸಿ ಪುಷ್ಪವಲ್ಲಿ, ಸಿಎ ನರೇಂದ್ರ ಕುಮಾರ್, ಕಟ್ಟಾ ನರಸಿಂಹಮೂರ್ತಿ, ವೆಂಕಟರಂಗಾರೆಡ್ಡಿ, ಜಯರಾಮ್, ಚೌಡಪ್ಪ, ನರಸಿಂಹಮೂರ್ತಿ, ನಾರಾಯಣಪ್ಪ, ಮಂಜುನಾಥ್ ಶಂಕರಪ್ಪ ಇನ್ನಿತರರಿದ್ದರು.

The Daily News Media

The Daily News Media