ಕೆಜಿಎಫ್-2 ವರ್ಲ್ಡ್‌ ಕ್ಲಾಸ್ ಚಿತ್ರ ಎಂದ ಉಮರ್ ಸಂಧು

ಕೆಜಿಎಫ್.. ಕೆಜಿಎಫ್.. ಕೆಜಿಎಫ್ ಸದ್ಯ ಎಲ್ಲೆಲ್ಲೂ ಕೆಜಿಎಫ್‌ನದ್ದೇ ಸುದ್ದಿ, ಕೆಜಿಎಫ್‌ನದ್ದೇ ಸದ್ದು. ವಿಶ್ವದಾದ್ಯಂತ ಕೆಜಿಎಫ್ 2 ಅಲೆಯ ಅಬ್ಬರ ಜೋರಾಗಿದೆ. ವಿಶ್ವದ ಮೂಲೆ, ಮೂಲೆಯಲ್ಲೂ ಕೂಡ ಈ ಚಿತ್ರವನ್ನು ನೋಡಲು ಸಿನಿಮಾ ಪ್ರಿಯರು ಕಾಯುತ್ತಿದ್ದಾರೆ. ’ಕೆಜಿಎಫ್ 2’ ಚಿತ್ರ ಹೇಗಿದೆ ಎನ್ನುವುದನ್ನು ಅರಿಯಲು ಏ.14ರ ವರೆಗೆ ಕಾಯಬೇಕಾಗಿಲ್ಲ. ಯಾಕೆಂದರೆ ಚಿತ್ರದ ಬಗ್ಗೆ ಮೊದಲ ವಿಮರ್ಶೆ ಈಗಾಗಲೆ ಹೊರ ಬಂದಿದೆ. ವಿದೇಶಿ ಸೆನ್ಸಾರ್ ಬೋರ್ಡ್ ಸದಸ್ಯ ಉಮರ್ ಸಂಧು ಚಿತ್ರದ ಬಗ್ಗೆ ವಿಮರ್ಶೆ ಬರೆದಿದ್ದಾರೆ.
ಉಮರ್ ಸಂಧು ಬರೆದ ಎರಡು ಸಾಲಿನ ವಿಮರ್ಶೆ ಒಂದೇ ಸಾಕು ಕೆಜಿಎಫ್ 2 ಚಿತ್ರ ಯಾವ ರೇಂಜಿಗೆ ಇರಲಿದೆ ಎನ್ನುವುದನ್ನು ತಿಳಿಯಲು. ಅಚ್ಚರಿ ಎಂದರೆ ಈತ ಕೆಜಿಎಫ್ 2 ಚಿತ್ರಕ್ಕೆ 5ಕ್ಕೆ 5 ಅಂಕಗಳನ್ನು ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಕಿರಿಟ ಕೆಜಿಎಫ್ 2 ಚಿತ್ರವನ್ನು ನೋಡಿದ ಉಮರ್ ಸಂಧು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದು ಕನ್ನಡ ಚಿತ್ರದ ರಂಗದ ಕಿರೀಟ ಎಂದು ಬರೆದುಕೊಂಡಿದ್ದರೆ. ಕೆಜಿಎಫ್ 2 ಆರಂಭದಿಂದ ಅಂತ್ಯದ ವರೆಗೂ ಆ್ಯಕ್ಷನ್, ಅಚ್ಚರಿಯ ಸಂಗತಿಗಳು, ಸಸ್ಪೆನ್ಸ್‌, ಥ್ರಿಲ್ಲರ್ ಅಂಶಗಳೇ ಇದೆ. ಚಿತ್ರದ ಡೈಲಾಗ್ಸ್‌ ತುಂಬಾ ನೀಟ್ ಮತ್ತು ಶಾರ್ಪ್ ಆಗಿವೆ.

ಅತ್ಯುತ್ತಮವಾದ ಚಿತ್ರ, ನಿರ್ದೇಶಕ ಉತ್ತಮವಾದ ಕೆಲಸ ಮಾಡಿದ್ದಾರೆ. ಕಥೆಯ ತೀವ್ರತೆಯನ್ನು ಚಿತ್ರದುದ್ದಕ್ಕೂ ಕಟ್ಟಿಕೊಡುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರತಿಯೊಬ್ಬ ಕಲಾವಿದನಿಂದಲೂ ಸೊಗಸಾದ ಅಭಿನಯ ಮೂಡಿ ಬಂದಿದೆ. ಯಶ್ ಮತ್ತು ಸಂಜಯ್ ದತ್ ಇಬ್ಬರು ಅತ್ಯದ್ಭುತವಾಗಿ ತೆರೆಯ ಮೇಲೆ ಕಂಗೊಳಿಸಿದ್ದರೆ. ಎಂದು ಚಿತ್ರದ ಕಥೆ ಮತ್ತು ಪಾತ್ರಧಾರಿಗಳ ಬಗ್ಗೆ ಹೇಳಿದ್ದಾರೆ.

ಕೆಜಿಎಫ್ 2 ವರ್ಲ್ಡ್‌ ಕ್ಲಾಸ್ ಸಿನಿಮಾ! ಕೆಜಿಎಫ್ 2 ಚಿತ್ರದ ಕೇವಲ ಕನ್ನಡದ ಅಥವಾ ಪ್ಯಾನ್ ಇಂಡಿಯಾ ಚಿತ್ರ ಮಾತ್ರ ಅಲ್ಲ. ಇದು ಒಂದು ವರ್ಲ್ಡ್‌ ಕ್ಲಾಸ್ ಸಿನಿಮಾ ಎಂದಿದ್ದಾರೆ. ಕೆಜಿಎಫ್ 2 ಕೇವಲ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಚಿತ್ರ ಅಲ್ಲ. ಇದು ಪ್ರಶಾಂತ್ ನೀಲ್ ಅವರ ವರ್ಲ್ಡ್‌ ಕ್ಲಾಸ್ ಚಿತ್ರ ಎಂದು ಉಮರ್ ಸಿಂಧು ತಮ್ಮ ವಿಮರ್ಶೆಯಲ್ಲಿ ಉಲ್ಲೇಖಿಸಿದ್ದಾರೆ.

The Daily News Media

The Daily News Media