ತಮ್ಮನನ್ನು ಕೊಚ್ಚಿ ಕೊಂದ ಅಣ್ಣ

ನಂಜನಗೂಡು : ಜಾಗದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಆಘಾತಕಾರಿ ಘಟನೆ ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವನು ಗೋವಿಂದ ನಾಯಕ (೩೫) ಎಂಬುವನಾಗಿದ್ದು, ಆರೋಪಿ ರಂಗಸ್ವಾಮಿ ಪರಾರಿಯಾಗಿದ್ದಾನೆ.
ಸಹೋದರರಾಗಿದ್ದ ಗೋವಿಂದ ನಾಯ್ಕ ಮತ್ತು ರಂಗಸ್ವಾಮಿ ನಡುವೆ ಜಾಗದ ವಿಚಾರಕ್ಕೆ ಪದೇ ಪದೆ ಜಗಳ ನಡೆಯುತ್ತಿತ್ತು. ಶನಿವಾರ ತಡರಾತ್ರಿ ಮನೆಯ ಮುಂಭಾಗದಲ್ಲಿದ್ದ ಶೌಚಾಲಯದ ಕೊಠಡಿಯ ಬೀಗ ಒಡೆದ ಎಂದು ಕ್ಯಾತೆ ತೆಗೆದು ರಂಗಸ್ವಾಮಿ ತಮ್ಮನ ಮೇಲೆ ಘ?ಣೆಗೆ ಮುಂದಾಗಿದ್ದಾನೆ. ಸಹೋದರರ ಮಾತಿನ ಚಕಮಕಿ ಗಮನಿಸಿದ ಗ್ರಾಮಸ್ಥರು ಜಗಳ ಬಿಡಿಸಿದ್ದರು. ತಡರಾತ್ರಿ ೧೧ ಗಂಟೆ ಸುಮಾರಿಗೆ ಗೋವಿಂದನಾಯ್ಕ ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ರಂಗಸ್ವಾಮಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾದನು. ಗೋವಿಂದನ ತಲೆ ಮತ್ತು ಕುತ್ತಿಗೆಗೆ ತೀವ್ರ ಗಾಯವಾಗಿ ಆತ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು ಎನ್ನಲಾಗಿದೆ.
ಸ್ಥಳಕ್ಕೆ ಬಂದ ದೊಡ್ಡ ಕವಲಂದೆ ಪಿಎಸ್?ಐ ಮಹೇಂದ್ರ ಮತ್ತು ಸಿಬ್ಬಂದಿ ಗಾಯಾಳು ಗೋವಿಂದ ನಾಯಕನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಿದರೂ ಆತ ಮೃತಪಟ್ಟನು.

The Daily News Media

The Daily News Media