ಹೂಳೆತ್ತುವ ಕಾಮಗಾರಿ ಪರಿಶೀಲನೆ

ದಿ ಡೈಲಿ ನ್ಯೂಸ್ ಶಹಾಬಾದ
ನಗರದ ಅಜನಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳವನ್ನು ಕಲಬುರಗಿ ಶಾಸಕ ಬಸವರಾಜ ಮತ್ತಿಮಡು ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಳೆಶಹಾಬಾದಿಂದ ಭೀಮಶಪ್ಪ ನಗರದ ಸೇತುವೆವರೆಗೆ ಅಜನಿ ಹಳ್ಳವನ್ನು ಹೂಳೆತ್ತುವ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ಹಂತದಲ್ಲಿದೆ. ಹೂಳೆತ್ತಿದ್ದ ಮಣ್ಣನ್ನು ಹಳ್ಳದ ಎರಡು ಕಡೆ ಒಡ್ಡಿನಂತೆ ಹಾಕಿ ತಡೆಗೋಡೆಯಂತೆ ಮಾಡಲಾಗಿದೆ. ಈ ಬಾರಿ ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗಲಿದೆ ಎಂದರು.
ಕಳೆದ ಎರಡು ವರ್ಷಗಳಿಂದ ಮಳೆ ಹೆಚ್ಚಾದ ಪರಿಣಾಮ ಹಳ್ಳದಲ್ಲಿ ಹೂಳು ತುಂಬಿಕೊಂಡಿತ್ತು. ಅಲ್ಲದೇ ಗಿಡಗಂಟಿ ಬೆಳೆದಿದ್ದವು. ಇಕ್ಕಟ್ಟಾಗಿದ್ದ ಅಜನಿ ಹಳ್ಳದಲ್ಲಿ ಮಳೆ ನೀರು ಬಂದಾಗ ಹರಿಯಲು ಸ್ಥಳವಿಲ್ಲದೇ ಹಳೆಶಹಾಬಾದ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ, ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗುತ್ತಿತ್ತು. ನಬಾರ್ಡ ಯೋಜನೆಯಡಿ ಸುಮಾರು ೧ ಕೋಟಿ ೧೬ ಲಕ್ಷ ರೂ. ಅನುದಾನದಲ್ಲಿ ಹೂಳೆತ್ತುವ ಹಾಗೂ ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಸಂಪೂರ್ಣವಾದ ನಂತರ ಮಳೆ ಬಂದಾಗಲೊಮ್ಮೆ ನೀರು ಸರಾಗವಾಗಿ ಹರಿಯಲಿದೆ ಎಂದರು. ಚೆಕ್ ಡ್ಯಾಮ ನಿರ್ಮಾಣದಿಂದ ನೀರು ಅಲ್ಲಲ್ಲಿ ನಿಲ್ಲುವುದರಿಂದ ಅಂತರ್ಜಲ ವೃದ್ಧಿಯೂ ಆಗಲಿದೆ. ದನಕರುಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಒದಗುತ್ತದೆ. ಈಗಾಗಲೇ ಉತ್ತಮ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಇಇ ಶರಣು ಪೂಜಾರಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಶಿವುಗೌಡ ಪಾಟೀಲ,ಶ್ರೀಶೈಲಪ್ಪ ಬೆಳಮಗಿ,ಮಲ್ಲಿಕಾರ್ಜುನ ವಾಲಿ, ಸಿದ್ದು ಬೆಳಗುಂಪಿ,ಶಿವಕುಮಾರ ನಾಟೇಕಾರ, ಶರಣಗೌಡ ಪಾಟೀಲ, ಸಂತೋಷ ಪಾಟೀಲ,ಸದಾನಂದ ಕುಂಬಾರ, ದತ್ತಾ ಫಂಡ, ರೇವಣಸಿದ್ದ ಮತ್ತಿಮಡು,ಶರಣು ಕೌಲಗಿ,ಸಿದ್ದು ಕುಂಬಾರ,ರೆಹಮಾನ ಸಾಹೇಬ,ಶರಣಪ್ಪ ಕೊಡದೂರ, ಶರಣಪ್ಪ ಬುಗಶೆಟ್ಟಿ, ಮಲ್ಲಿಕಾರ್ಜುನ ಚಂದನಕೇರಿ, ಕುಪೇಂದ್ರ ತುಪ್ಪದ,ವಿಜಯಕುಮಾರಸ್ವಾಮಿಗಳು, ವಿಶ್ವನಾಥ ಹಡಪದ, ಚನ್ನಮಲ್ಲಪ್ಪ ಸಿನ್ನೂರ, ವಿನೋದ ವಾಲಿ ಸೇರಿದಂತೆ ಅನೇಕರು ಇದ್ದರು.

The Daily News Media

The Daily News Media