ರೈತ ಮಕ್ಕಳ ವ್ಯಾಸಂಗಕ್ಕೆ ಉತ್ತೇಜನ

ದಿ ಡೈಲಿ ನ್ಯೂಸ್ ಚಾಮರಾಜನಗರ
ಬಿಜೆಪಿ ಸರ್ಕಾರದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದು ರಾಜ್ಯ ಅರಣ್ಯ ಮತ್ತು ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ತಿಳಿಸಿದರು.
ತಾಲೂಕಿನ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಭಾಗದಲ್ಲಿ ಎಪಿಎಂಸಿ ಚುನಾವಣೆ ಸಂಬಂಧ ಹರವೆ ಹಾಗೂ ಉಡಿಗಾಲ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹದೇವಪ್ರಸಾದ್ ಪರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪ ಸರ್ಕಾರದಿಂದ ರೈತ ಪರವಾದ ಯೋಜನೆಗಳನ್ನು ಜಾರಿ ಮಾಡಿ, ರೈತರ ಪರವಾದ ಸರ್ಕಾರ ನಮ್ಮದಾಗಿದೆ. ಹೀಗಾಗಿ ರೈತರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಮಹದೇವಪ್ರಸಾದ್, ಹಾಗೂ ಉಡಿಗಾಲ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿಂಗಮ್ಮಣಮ್ಮ ಅವರನ್ನು ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸಬೇಕು. ಎಪಿಎಂಸಿ ಆಡಳಿತ ಬಿಜೆಪಿ ಬೆಂಬಲಿತರು ಸ್ಥಾಪನೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.
ಚಾಮುಲ್ ನಿರ್ದೇಶಕರಾದ ಕಿಲಗೆರೆ ಶಶಿಕುಮಾರ್, ಮಲೆಯೂರು ರವಿಶಂಕರ್, ಗುಂಡ್ಲುಪೇಟೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶನಾಯಕ, ಎಪಿಎಂಸಿ ಹರವೆ ಕ್ಷೇತ್ರದ ಅಭ್ಯರ್ಥಿ ಮಹದೇವಪ್ರಸಾದ್, ಉಡಿಗಾಲ ಕ್ಷೇತ್ರದ ಅಭ್ಯರ್ಥಿ ನಿಂಗಮ್ಮಣಮ್ಮ, ಮಂಜುನಾಥ್ ಮುಖಂಡರಾದ ಮಲೆಯೂರು ನಾಗೇಂದ್ರ, ಹರವೆ ಮಂಜು, ಶೇಖರ್, ಮೊದಲಾದವರು ಇದ್ದರು.

The Daily News Media

The Daily News Media