ನಾಳೆಯಿಂದ ಡೆಮೋ ರೈಲು ಆರಂಭ

ದಿ ಡೈಲಿನ್ಯೂಸ್ ಬಳ್ಳಾರಿ
ಜನತೆಯ ಅನುಕೂಲಕ್ಕಾಗಿ ನಮ್ಮ ಬೇಡಿಕೆಗೆ ಮನ್ನಣೆ ನೀಡಿದ ರೈಲ್ವೆ ಇಲಾಖೆ ಏ.೧೨ರಿಂದ ಹೊಸಪೇಟೆ- ಬಳ್ಳಾರಿ ಹಾಗೂ ಬಳ್ಳಾರಿ-ಹರಿಹರ ಮಾರ್ಗದಲ್ಲಿ ನೂತನವಾಗಿ ೨ ಡೆಮೋ ರೈಲು ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ ಎಂದು ರಾಜ್ಯ ರೈಲ್ವೆ ಕ್ರಿಯಾಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ತಿಳಿಸಿದ್ದು, ಈ ಸೌಲಭ್ಯಕ್ಕಾಗಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಬಳ್ಳಾರಿ ರೈಲು ನಿಲ್ದಾಣದಲ್ಲಿ ಹಾಗೂ ನಿಯೋಗದ ಮೂಲಕ ಹುಬ್ಬಳ್ಳಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮನವಿಪತ್ರ ಸಲ್ಲಿಸಲಾಗಿತ್ತು ಎಂದಿದ್ದಾರೆ.
ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಸಂಚರಿಸುವ ಹೊಸಪೇಟೆ-ಬಳ್ಳಾರಿ ಡೆಮೋ ರೈಲು ರೈಲು ನಸುಕಿನ ೫-೪೦ಗಂಟೆಗೆ ಹೊಸಪೇಟೆಯಿಂದ ಹೊರಟು ಬೆಳಗ್ಗೆ ೭-೨೦ಕ್ಕೆ ಬಳ್ಳಾರಿ ತಲುಪುತ್ತದೆ. ರಾತ್ರಿ ರಾತ್ರಿ ೮-೧೦ ಬಳ್ಳಾರಿಯಿಂದ ಹೊರಡುವ ರೈಲು ರಾತ್ರಿ ೯-೪೫ಕ್ಕೆ ಹೊಸಪೇಟೆಗೆ ತಲುಪುತ್ತದೆ. ಹಾಗೆಯೇ ಬಳ್ಳಾರಿ-ಹರಿಹರ ರೈಲು ಬಳ್ಳಾರಿಯಿಂದ ಬೆಳಗ್ಗೆ ೭-೩೦ ಗಂಟೆಗೆ ಹೊರಟು ಹೊಸಪೇಟೆ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಮಾರ್ಗವಾಗಿ ೧-೩೦ಕ್ಕೆ ಹರಿಹರ ತಲುಪುತ್ತದೆ, ಮಧ್ಯಾಹ್ನ ೨ ಗಂಟೆಗೆ ಹರಿಹರದಿಂದ ಹೊರಡುವ ರೈಲು ರಾತ್ರಿ ೮ಗಂಟೆಗೆ ಬಳ್ಳಾರಿ ತಲುಪುತ್ತದೆ. ವಾರದ ಒಂದು ದಿನದ ರೈಲು ಹೊಸಪೇಟೆ ಹುಬ್ಬಳ್ಳಿ ಮಧ್ಯೆ ಸಂಚರಿಸಲಿದೆ. ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಯ ಜನತೆ ಈ ರೈಲ್ವೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

 

The Daily News Media

The Daily News Media