ಸುಡುಬಿಸಿಲಿಗೆ ಪೈಪೋಟಿ ನೀಡಿದ ಬೆಲೆ ಏರಿಕೆ ಬಿಸಿ

ಪ್ರವೀಣ ಗಿರಿ, ಚನ್ನಮ್ಮನ ಕಿತ್ತೂರು
ಸುಡು ಬಿಸಿಲಿಗೆ ಪೈಪೋಟಿ ನೀಡುವಂತೆ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಿರುವ ಪರಿಣಾಮ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಡವರು, ದುರ್ಬಲರು, ಮಧ್ಯಮ ವರ್ಗದ ಜನ ತಮ್ಮ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆಗೆ ಜಾರಿದಂತಾಗಿದೆ.
ಮುಖ್ಯವಾಗಿ ಅಡುಗೆ ಎಣ್ಣೆ, ಅಡುಗೆ ಅನಿಲ ಬೆಲೆಏರಿಕೆಯಾಗಿದ್ದು ಇವರ ಚಿಂತೆಗೆ ಕಾರಣವಾಗಿದೆ. ಇನ್ನು ಕಟ್ಟಡ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಇನ್ನೂ ಮನೆ ಕಟ್ಟುವುದು ಕನಸಿನ ಮಾತು ಎಂಬಂತಾಗಿದೆ. ಕಬ್ಬಿಣ, ಸಿಮೆಂಟ್, ಪ್ಲಂಬಿಂಗ್ ಹೀಗೆ ಪ್ರತಿಯೊಂದು ವಸ್ತುಗಳ ದರವೂ ದಿನದಿಂದ ದಿನಕ್ಕೆ ದೂರದ ರಷ್ಯಾ-ಉಕ್ರೇನ್ ಯುದ್ಧದ ಸಬೂಬು ಹೇಳುತ್ತಿರುವ ವ್ಯಾಪಾರಿಗಳು ಮನೆ ಕಟ್ಟುವವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಅಡುಗೆ ಅನಿಲ, ಅಡುಗೆ ಎಣ್ಣೆ ಹೆಚ್ಚಾದ ಪರಿಣಾಮ ಹೊಟೇಲ್ ತಿನಿಸುಗಳ ಬೆಲೆಯಲ್ಲೂ ಶೇ.೧೦ ರಷ್ಟು ಹೆಚ್ಚಿಸುವ ತಯಾರಿ ನಡೆದಿದೆ. ಈ ಬಗ್ಗೆ ಹೊಟೇಲ್ ಮಾಲೀಕರ ಸಂಘವು ಚರ್ಚೆ ಮಾಡುತ್ತಿರುವುದಾಗಿ ತಿಳಿದುಬಂದಿದೆ.

 

The Daily News Media

The Daily News Media