ಉಚಿತ ಆರೋಗ್ಯ ಸೌಲಭ್ಯ ಸದ್ಬಳಕೆ

ದಿ ಡೈಲಿ ನ್ಯೂಸ್ ದೇವನಹಳ್ಳಿ
ವಿಶ್ವ ಆರೋಗ್ಯ ದಿನದ ಅಂಗವಾಗಿ ಆಕಾಶ್ ಆಸ್ಪತ್ರೆಯಿಂದ ತಾಲೂಕಿನ ಜನತೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಕಾಶ್ ಆಸ್ಪತ್ರೆಯ ಆರ್‌ಎಂಒ ಡಾ. ಸುನೀಲ್ ಹೆಗ್ಡೆ ತಿಳಿಸಿದರು.
ಪಟ್ಟಣದ ಪ್ರಸನ್ನಹಳ್ಳಿ ಬಳಿ ಇರುವ ಆಕಾಶ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿದ ಅವರು, ಮನುಷ್ಯ ಜೀವಂತವಾಗಿರಬೇಕಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಅದನ್ನು ನಮ್ಮ ಆಸ್ಪತ್ರೆಯಲ್ಲಿ ತಾಲೂಕಿನ ಜನತೆಗೆ ಒದಗಿಸಲಾಗುತ್ತಿದೆ. ಇಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ದಿನದ ೨೪ ಗಂಟೆಯು ದೊರೆಯುತ್ತಿದೆ ಎಂದರು.
ಆಸ್ಪತ್ರೆಯ ವೈಸ್ ಚೇರ್ಮನ್ ಅಮರ್ ಗೌಡ ಮಾತನಾಡಿ, ನಮ್ಮ ಸಿಬ್ಬಂದಿ ಪಟ್ಟಣದ ೨೩ ವಾರ್ಡ್‌ಗಳಿಗೆ ತೆರಳಿ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡುಬಂದಂರೆ ಅವರನ್ನು ಆಸ್ಪತ್ರೆಗೆ ಕರೆತಂದು ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಇದೇ ವೇಳೆ ಆಕಾಶ್ ಆಸ್ಪತ್ರೆ ಮೆಡಿಕಲ್ ಸೂಪರಿಂಡಿಂಟ್ ಡಾ.ಬ್ರಿಜೇಶ್, ಕ್ಯಾಂಪ್ ವ್ಯವಸ್ಥಾಪಕ ಶ್ರೀಕಾಂತ್ ಸೇರಿದಂತೆ ಸಿಬ್ಬಂದಿ ಇದ್ದರು.

The Daily News Media

The Daily News Media