ಒಗ್ಗಟ್ಟಿನ ಕೆಲಸಕ್ಕೆ ಮಾತ್ರವೇ ಸ್ಪಂದನೆ

ದಿ ಡೈಲಿ ನ್ಯೂಸ್ ವಿಜಯಪುರ
ಪಟ್ಟಣದ ಕಾಂಗ್ರೆಸ್ ಮುಖಂಡರು ನಿಮ್ಮ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾರೆ ಕೆಲಸ ಮಾಡಬೇಕಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುಖಂಡರು ಪಟ್ಟಣದ ಅಭಿವೃದ್ಧಿಯ ಕಡೆ ಹೆಚ್ಚು ಗಮನಹರಿಸಬೇಕು. ನಿಮ್ಮ ನಿಮ್ಮ ಭಿನ್ನಾಅಭಿಪ್ರಾಯ ಪಕ್ಕಕ್ಕಿಟ್ಟು ಎಲ್ಲರೂ ಒಟ್ಟಾರೆ ಕೆಲಸ ಮಾಡಬೇಕು, ಮುಖಂಡರು ಒಟ್ಟಾಗಿ ಇರುವುದನ್ನು ನಾನು ಬಯಸುತ್ತೇನೆ ಹೊರತು ಬೇರೆ ಬೇರೆ ಉದ್ದೇಶಗಳ ಕಡೆ ಗಮನ ಹರಿಸುವುದಿಲ್ಲ. ಒಟ್ಟಾರೆ ಸಿಸ್ತನ ಸಿಪಾಯಿಗಳಾಗಿ ಕೆಲಸ ಮಾಡಬೇಕಿದೆ ಎಂದರು. ಇನ್ನುಮುಂದೆ ಪಟ್ಟಣದಲ್ಲಿ ಯಾವುದೇ ಕಾರ್ಯಕ್ರಮಗಳಾದರೂ ಎಲ್ಲಾರು ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಮಾತ್ರವೇ ನಾನು ಸ್ಪಂದಿಸುತ್ತೇನೆ. ಇಲ್ಲವಾದಲ್ಲಿ ನಾನು ಹೇಳಿದ ಜಾಗಕ್ಕೆ ನೀವೇ ಬರಬೇಕು ಹೊರತು ನಾನು ಬರುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಈ ಸಂದ‘ರ್ದಲ್ಲಿ ಗಂಗಾತಾಯಿ ಜಾತ್ರಾ ಕಮಿಟಿಯಿಂದ ಆಹ್ವಾನ ಪತ್ರಿಕೆಯನ್ನು ಕಮಿಟಿ ಅ‘್ಯಕ್ಷರು ಹಾಗೂ ಸದಸ್ಯರು ನೀಡಿದರು. ಈ ಸಂದ‘ರ್ದಲ್ಲಿ ಪುರಸ‘ಾ ಸದಸ್ಯ ಎಂ.ಸತೀಶ್ ಕುಮಾರ್, ನಂದಕುಮಾರ್, ‘ವ್ಯಮಹೇಶ್, ಮಾಜಿ ಪುರಸ‘ಾ ಸದಸ್ಯ ಸಂಪತ್‌ಕುಮಾರ್, ಮುನಿರಾಜ್, ರುದ್ರಮೂರ್ತಿ, ನಾರಾಯಣಸ್ವಾಮಿ, ಎಂ.ಆನಂದಪ್ಪ, ಆರ್‌ಎಂಸಿಟಿ ಮಂಜುನಾಥ್, ಅಣ್ಣಮ್ಮ ಸುರೇಶ್, ಸೈಪುಲ್ಲ, ಬಾರ್ ಸಂಪತ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಪುರಸ‘ಾ ಅ‘್ಯಕ್ಷ ನಾರಾಯಣಸ್ವಾಮಿ, ರಾಮಚಂದ್ರಪ್ಪ, ಪ್ರಸನ್ನಕುಮಾರ್ ಇತರರಿದ್ದರು.

The Daily News Media

The Daily News Media