ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮನವಿ

ದಿ ಡೈಲಿ ನ್ಯೂಸ್ ಕೋಲಾರ
ಚರ್ಚಿಗೆ ಸಂಬಂ‘ಪಟ್ಟ ಸದಸ್ಯರನು ಸಸ್ಪೆಂಡ್ ಮಾಡುವ ಅಧಿಕಾರ ಶಾಂತಕುಮಾರ್‌ಗೆ ಇಲ್ಲ ಎಂದು ಮೆಥೋಡಿಸ್ಟ್‌ ಚರ್ಚ್ ಪ್ರಾಪರ್ಟಿ ಚೇರ್‌ಮೆನ್ ಸುಧೀರ್ ಹೇಳಿದರು.
ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿ‘ಟನೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಬಹಳ ವರ್ಷಗಳಿಂದ ಚರ್ಚ್ ಆಡಳಿತ ಗಮನಿಸಿದ್ದೇವೆ. ಒಂದು ಉತ್ತಮ ರೀತಿಯಲ್ಲಿ ಚರ್ಚ್ ಆಡಳಿತ ನಡೆಯುತ್ತಿತ್ತು. ಯಾರ ಮೇಲು ಸಹ ಯಾವುದೇ ರೀತಿಯ ದೌರ್ಜನ್ಯ ಇರಲಿಲ್ಲ. ಸಿಕ್ಕ ಸಿಕ್ಕವರನ್ನ ಕಾರಣವಿಲ್ಲದೆ ಸಸ್ಪೆಂಡ್ ಮಾಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಶಾಂತಕುಮಾರ್ ಅವರ ಆಡಳಿತ ಎಲ್ಲರಿಗೂ ಬೇಸರ ತರುತ್ತಿದೆ.
ಇಲ್ಲಿನ ಯಾವುದೇ ಕಾರ್ಮಿಕರನ್ನ ಸಸ್ಪೆಂಡ್ ಮಾಡಬೇಕಾದರೆ ಸದಸ್ಯರ ಗಮನಕ್ಕೆ ತರಬೇಕು, ಒಪ್ಪಿಗೆ ಪಡೆಯಬೇಕು.ಆ ನಂತರ ಸಸ್ಪೆಂಡ್ ಮಾಡಬೇಕು. ಕಾರಣವಿಲ್ಲದೆ ಯಾರನ್ನೂ ಸಹ ಸಸ್ಪೆಂಡ್ ಮಾಡುವ ಹಾಗಿಲ್ಲ. ಕಳೆದ ಕೆಲವು ದಿನಗಳ ಹಿಂದೆ 9 ಜನರನ್ನ ಸಸ್ಪೆಂಡ್ ಮಾಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದೇ ಇಲ್ಲ. ನಮಗೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದರು.
ನೊಂದವರು ನಮ್ಮ ಬಳಿ ನೋವಿನ ಅಳಲು ಹೇಳಿಕೊಳ್ಳುತ್ತಾರೆ. ಅವರಿಗೆ ನ್ಯಾಯ ಕೊಡಿಸಲು ಆಗುತ್ತಿಲ್ಲ. ಅಂತಹ ದೌರ್ಜನ್ಯದ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ. ಇದು ಹೀಗೇ ಮುಂದುವರಿದರೆ ಇಲ್ಲಿನ ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದು. ಹಾಗಾಗಿ ಇಂದು ಈ ಎಲ್ಲಾ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಮೂಲಕ ಶಾಂತಕುಮಾರ್ ಅವರ ದೌರ್ಜನ್ಯ ಆಡಳಿತಕ್ಕೆ ಕಡಿವಾಣ ಹಾಕಲಿದ್ದೇವೆ ಎಂದರು. ಜಿಲ್ಲಾಧಿಕಾರಿ ಡಾ ವೆಂಕಟರಾಜು ಅವರು ಮನವಿ ಪಡೆದರು.
ಈ ಸಂದ‘ರ್ದಲ್ಲಿ ಚರ್ಚಿಗೆ ಸಂಬಂ‘ಪಟ್ಟ ಸದಸ್ಯರು ಇದ್ದರು.

The Daily News Media

The Daily News Media