ಉಚಿತ ಆರೋಗ್ಯ ತಪಾಸಣ ಶಿಬಿರ

ದಿ ಡೈಲಿ ನ್ಯೂಸ್ ಚಿತ್ರದುರ್ಗ
ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಉತ್ತಮ ಎಂದು ರೋಟರಿ ಕ್ಲಬ್ ಅಸಿಸ್ಟೆಂಟ್ ಗೌರ್ನರ್ ಗಾಯತ್ರಿ ಶಿವರಾಂ ತಿಳಿಸಿದರು.
ಚಿತ್ರದುರ್ಗ ರೋಟರಿ ಕ್ಲಬ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲ‘ವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲದಲ್ಲಿ ವ್ಯಾಯಾಮ ಕಡಿಮೆಯಾಗಿದೆ. ಇದರಿಂದ ದೇಹದಲ್ಲಿ ಶಕ್ತಿ ಕುಗ್ಗಿ ರೋಗ ನಿರೋ‘ಕ ಶಕ್ತಿ ಕಡಿಮೆಯಾಗುತ್ತದೆ, 40 ದಾಟಿದವರು ಪ್ರತಿ ಮೂರು ತಿಂಗಳಿಗೊಮ್ಮ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು ಎಂದು ಕರೆ ನೀಡಿದರು. ರೋಟರಿ ಕ್ಲಬ್‌ನಿಂದ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನತೆಯ ಆರೋಗ್ಯ ಕಾಪಾಡಲಾಗುತ್ತದೆ. ಶಾಲಾ ಮಕ್ಕಳಿಗೆ ಅಗತ್ಯ ಸಾಮಗ್ರಿಗಳನ್ನು ನೀಡುವುದರೊಂದಿಗೆ ಅವರ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಅಪೌಷ್ಟಿಕತೆಯ ಮಕ್ಕಳಿಗೆ ಪೌಷ್ಟಿಕತೆ ನೀಡುವ ವಿವಿ‘ ರೀತಿಯ ವಸ್ತುಗಳನ್ನು ನೀಡುವುದರೊಂದಿಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು. ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ. ನಿಷಾನ್ ಮಾತನಾಡಿ, ಇಲ್ಲಿ ಉಚಿತವಾಗಿ ತಪಾಸಣೆ ನಡೆಸಿ ಅಗತ್ಯವಿದ್ದರೆ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದಲ್ಲಿ ಆರೋಗ್ಯವಂತಾಗಿರಬಹುದಾಗಿದೆ ಎಂದು ತಿಳಿಸಿದರು.
ಸಪ್ತಗಿರಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಹನುಮಂತಯ್ಯ, ಡಾ.ಅರುಣ್,ಡಾ ಸುಶ್ಮೀತಾ, ಡಾ.ಇಂದು ಶಿಬಿರದ ಸಂಚಾಲಕರಾದ ರಾಘವೇಂದ್ರ ‘ಾಗವಹಿಸಿದ್ದರು.
ರೋಟರಿ ಕ್ಲಬ್ನ ನಿಯೋಜಿತ ಅ‘್ಯಕ್ಷರಾದ ಕನಕರಾಜು, ಕಾರ್ಯದರ್ಶಿ ರೋ. ಎಯಶ್ರೀ ಷಾ. ರೋ.ವಿಕ್ರಾಂತ್ ಜೈನ್ ವೀರ‘ದ್ರಸ್ವಾಮಿ ಎಸ್.ವೀರೇಶ್, ಶಿವರಾಂ, ತರುಣಾ ಷಾ, ಚಂದ್ರಮೋಹನ್ ಉಪಸ್ಥಿತರಿದ್ದರು.

The Daily News Media

The Daily News Media