ಪುರಸ‘ೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ

ಯಾವುದೇ ಅನಾಹುತ ನಡೆಯದಂತೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ: ಶಾಸಕ ಕೆ.ಎನ್.ರಾಜಣ್ಣ

ದಿ ಡೈಲಿ ನ್ಯೂಸ್ ಮ‘ುಗಿರಿ
ಮುಖ್ಯ ರಸ್ತೆಗಳ ಅಕ್ಕ-ಪಕ್ಕಗಳಲ್ಲಿ ಅನಗತ್ಯವಾಗಿ ಸುರಿದಿರುವ ಕಸ, ಮಣ್ಣು , ಮುಳ್ಳುಗಿಡಗಳನ್ನು ತೆರವುಗೊಳಿಸಿ ಯಾವುದೇ ಅನಾಹುತಗಳು ನಡೆಯದಂತೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಪುರಸ‘ೆ ಸಿಬ್ಬಂದಿಗೆ ಶಾಸಕ ಕೆ ಎನ್ ರಾಜಣ್ಣ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಪುರಸ‘ೆಗೆ ದಿಢೀರ್ ‘ೇಟಿ ನೀಡಿ ಪುರಸ‘ಾ ಸದಸ್ಯರು ಹಾಗೂ ಸಿಬ್ಬಂದಿಯೊಂದಿಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು . ಮುಂಗಾರು ಆರಂ‘ವಾಗುತ್ತಿರುವುದರಿಂದ ಯುಜಿಡಿ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದು ಜನತೆಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು ತಿಳಿಸಿದರು.
ಕೆಲವೊಂದು ಮೋರಿಗಳು ಕಟ್ಟಿಕೊಳ್ಳುತ್ತಿದ್ದು ಸರಿಪಡಿಸಿ ನೀರು ಹರಿಯುವಂತೆ ಮಾಡಬೇಕು. ಕೆಲ ವಾರ್ಡ್‌ಗಳಲ್ಲಿ ನಾಗರಿಕರಿಗೆ ಸೇರಿದ ನಿವೇಶನ , ಮನೆಗಳ ಖಾತೆ ಬದಲಾವಣೆಯ ಬಗ್ಗೆ ಹೆಚ್ಚು ಆರೋಪಗಳು ಬಂದಿವೆ. ರಾಮಕೃಷ್ಣ ಮಠದ ಖಾತೆ ಬದಲಾವಣೆಗೆ 20ಸಾವಿರ ರೂ ಬೇಡಿಕೆ ಇಟ್ಟಿರುವ ಬಗ್ಗೆ ಮಾ‘್ಯಮಗಳಲ್ಲಿ ಪ್ರಕಟವಾಗಿವೆ. ಈ ಬಗ್ಗೆ ಹಿಂದಿನ ಅವಧಿಗಳಲ್ಲಿ ಆಕ್ರಮವಾಗಿ ಖಾತೆಗಳು ಬದಲಾವಣೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಕೆಲ ಮ‘್ಯವರ್ತಿಗಳು ಕಚೇರಿ ಬಳಿ ಸುಳಿದಾಡುವುದನ್ನು ನಿಲ್ಲಿಸಬೇಕು. ಈಗಾಗಲೇ ಬದಲಾಗಿರುವ ಖಾತೆಗಳ ಬಗ್ಗೆ ಡಿಎಂಇ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಸಮಗ್ರವಾಗಿ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ನಜ್ಮಾ ರವರಿಗೆ ಸೂಚಿಸಿದರು. ಕುಡಿಯುವ ನೀರು ಪೋಲಾಗದಂತೆ ಸಮಗ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ನನ್ನ ಹಿಂದಿನ ಅವಧಿಯಲ್ಲಿ ಹೇಮಾವತಿ ನದಿಯ ನೀರು ಬಳಕೆಗೆ ಕ್ರಮ ಕೈಗೊಳ್ಳಲಾಗಿತ್ತು ಆದರೆ ಕೆಲವೊಂದು ‘ಾಗದಲ್ಲಿ ನೀರು ಪೋಲಾಗುತ್ತಿದೆ. ಈ ಬಗ್ಗೆ ಕೊರಟಗೆರೆ ಹಾಗೂ ಮ‘ುಗಿರಿ ಪುರಸ‘ೆಯ ಅಧಿಕಾರಿಗಳು ಜಂಟಿಯಾಗಿ ಸಿಬ್ಬಂದಿ ನೇಮಿಸಿ ನೀರು ಮತ್ತು ಮೋಟಾರ್ ಪಂಪ್‌ಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ತಿಳಿಸಿದರು. ಇನ್ನೊಂದು ವಾರದಲ್ಲಿ ಖಾತೆಗಳ ಬಗ್ಗೆ ನಿಯಮಗಳು ಸರಕಾರದಿಂದ ಜಾರಿಯಾಗಲಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರಿಂದ ಬರುವ ಕುಂದು ಕೊರತೆಗಳ ಬಗ್ಗೆ ಸಮಗ್ರವಾಗಿ ವಿಚಾರಿಸಿ ಅನುಕೂಲ ಮಾಡಿಕೊಡಬೇಕು. ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಪುಟ್ಟಮ್ಮ ಆನಂದ್, ಸುಜಾತ, ಶೋ‘ರಾಣಿ, ರಾಧಿಕಾ, ನಾಗಲತಾ, ಆಚಾರ್ ಮಂಜುನಾಥ್, ಲಾಲಪೇಟೆ ಮಂಜುನಾಥ್, ಆಲೀಂ, ನಟರಾಜು, ಮಾಜಿ ಅ‘್ಯಕ್ಷ ಎಂ.ಕೆ.ನಂಜುಂಡಯ್ಯ, ಅಯ್ಯೂಬ್, ಗಂಗಣ್ಣ ಮುಖಂಡ ಎಂ.ವಿ ಬಾಲಾಜಿಬಾಬು , ಶ್ರೀ‘ರ್, ಉಮೇಶ್, ಸಾಧಿಕ್, ಕಿಶೋರ್, ಸಿದ್ದಪ್ಪ, ಸುರೇಶ್ ದೊಡ್ಡೇರಿ ಶಿವಣ್ಣ , ಯುಜಿಡಿಯ ಎಇಇ ಕಾಶಿವಿಶ್ವನಾಥ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

The Daily News Media

The Daily News Media