ವಸ್ತು ಪ್ರದರ್ಶನ ಆಯೋಜನೆ

ದಿ ಡೈಲಿ ನ್ಯೂಸ್ ಬಳ್ಳಾರಿ
ನಗರದ ರೇಡಿಯೋ ಪಾರ್ಕ, ಆರ್‌ಟಿಒ ಕಚೇರಿ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ನಗರದಲ್ಲಿ ಮೊದಲ ಬಾರಿಗೆ ರೈನ್ ಬೋ ಎಕ್ಸಿಬಿಷನ್ ಅವರಿಂದ ಅಮ್ಯೂಜ್‌ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮೇ.25ರಂದು ಪ್ರಾರಂ‘ವಾಗಿದೆ, ಪ್ರತಿಯೊಬ್ಬರೂ ಕುಟುಂಬದ ಸದಸ್ಯರೊಂದಿಗೆ ‘ೇಟಿ ಆನಂದಿಸಬಹುದು ಎಂದು ರೈನ್ ಬೋ ಎಕ್ಸಿಬಿಷನ್ ಮಾಲೀಕ ವಿಜಯ ವಿಲ್ಸನ್ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿಕ್ಕ ಮಕ್ಕಳಿಂದ್ ಹಿಡಿದು ಎಲ್ಲ ವಯಸ್ಕರಿಗೂ ಆಟವಾಡುವ ಜೈಂಟ್ ವೀಲ್, ಕೋಲಂಬಸ್, ಡ್ರ್ಯಾಗನ್ ಟ್ರೇನ್, ಸೂಲಂಬೋ, ಬ್ರೇಕ್ ಡಾನ್ಸ್‌, ಫ್ರಿಬ್ಜಿ ಮತ್ತು ಮಕ್ಕಳ ಮನೋಲ್ಲಾಸಕ್ಕೆ ಪೆಡಲ್ ಬೋಟ್, ಜಲ್ಲಿಕಟ್ಟು, ಜಂಪಿಂಗ್, ಮಿನಿ ಟ್ರೇನ್ ಸೇರಿದಂತೆ ವಿವಿ‘ ಬಗೆಯ ಆಟಗಳನ್ನು ಆಡಿ ಆನಂದಿಸಬಹುದು. ಇದರ ಜೊತೆಗೆ ಗೃಹ ಬಳಕೆಯ ವಸ್ತುಗಳು, ಉಪಕರಣಗಳು, ಮಕ್ಕಳ ಆಟದ ಸಾಮಗ್ರಿಗಳು, ಅಡುಗೆ ಸಾಮಾನುಗಳು, ರೆಡಿಮೇಡ್ ಬಟ್ಟೆಗಳು ಸೇರಿದಂತೆ ಇತರೇ ವಸ್ತುಗಳು ಒಂದೇ ಸ್ಥಳದಲ್ಲಿ ಲ‘್ಯವಾಗಿದ್ದು, ನಾಗರಿಕರು ಇದರ ಸದುಪಯೋಗವನ್ನು ಪಡೆಯಬಹುದು. ಇದರ ಜೊತೆಗೆ ಬಗೆ ಬಗೆಯ ಆಹಾರ ಪದಾರ್ಥಗಳು, ತಿಂಡಿ ತಿನಸುಗಳು ಲ‘್ಯವಿದ್ದು, ಇಂದೇ ಕುಟಿಂಬದ ಸದಸ್ಯರೊಂದಿಗೆ ‘ೇಟಿ ನೀಡಿ ಆನಂದಿಸಬಹುದು. ಪ್ರತಿ ದಿನ ಸಂಜೆ 5. ರಿಂದ 9.30ರವರೆಗೆ ನಡೆಯಲಿದೆ ಎಂದರು. ಈ ಸಂದ‘ರ್ದಲ್ಲಿ ಎಕ್ಸಿಬಿಷನ್ ವ್ಯವಸ್ಥಾಪಕ ಅಮೀತ್ ಹುಬ್ಬಳ್ಳಿ ಸೇರಿದಂತೆ ಇತರರಿದ್ದರು.

The Daily News Media

The Daily News Media