ಮುಖಂಡರ ಒಗ್ಗಟ್ಟಿನಿಂದ ಗೆಲುವು

ದಿ ಡೈಲಿ ನ್ಯೂಸ್ ದೇವನಹಳ್ಳಿ
ಬಿಜೆಪಿ ಸರ್ಕಾರ ಅದಾನಿ, ಅಂಬಾನಿ ಪರ ಕೆಲಸ ಮಾಡುತ್ತಿದ್ದು ಬಡಜನರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ, ಬಡಜನರ ಅ‘್ಯುದಯವಾಗಬೇಕಾದರೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು, ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ 10 ವರ್ಷಗಳಿಂದಲೂ ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಅ‘್ಯರ್ಥಿ ಕೆ.ಎಚ್.ಮುನಿಯಪ್ಪ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ತಾಲೂಕಿನ ಆವತಿ, ಬಿದಲೂರು, ಕೊಯಿರಾ ಹಾಗೂ ವಿಶ್ವನಾಥಪುರದಲ್ಲಿ ಪ್ರಚಾರ ಸ‘ೆಯಲ್ಲಿ ಮಾತನಾಡಿ, ನಾವು ಕೇಂದ್ರದಲ್ಲಿ 10 ವರ್ಷ ರೈಲ್ವೆ ಸಚಿವರಾಗಿದ್ದ ವೇಳೆಯಲ್ಲಿ ಯಲಹಂಕ-ದೇವನಹಳ್ಳಿ-ಬಂಗಾರಪೇಟೆ ರೈಲನ್ನು ನಿಲ್ಲಿಸಿದ್ದರು. ಆಗ ನಮ್ಮ ಸರ್ಕಾರವಿದ್ದಾಗ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ, ಎಲ್ಲಾ ಕಡೆಗೂ ಸಂಚಾರ ಮಾಡುವಂತಾಯಿತು. ಇಂದಿರಾಗಾಂಧಿಯವರು ಬಡಜನರು ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ಆಡಳಿತ ನಡೆಸಿದ್ದರು. ಈಗಿನ ಬಿಜೆಪಿ ಸರಕಾರ ಜಿಎಸ್ಟಿ ಹೇರಿ ಬಡ-ಮ‘್ಯಮವರ್ಗದ ಜನ ಬದುಕು ಸಾಗಿಸುವುದೇ ದುಸ್ತರವಾಗಿದೆ ಎಂದರು.
ತೆಲಂಗಾಣ ಮಾಜಿ ಸಚಿವೆ ಪುಷ್ಪಲೀಲಾ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಮಕ್ಕಳು ಕುಡಿಯುವ ಹಾಲಿಗೂ ಜಿಎಸ್ಟಿ ಹೇರಿದೆ. ಹೋಟೆಲ್‌ಗೆ ಹೋದರೆ ಇಡ್ಲಿಗೂ ಜಿಎಸ್ಟಿ ಮಾಡಿದ್ದಾರೆ. ಬಡ ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಕಾಂಗ್ರೆಸ್ ಸರ್ಕಾರ ಬರಬೇಕು. ದೇವನಹಳ್ಳಿ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪನವರು ಗೆಲ್ಲಬೇಕು ಎಂದು ಹೇಳಿದರು. ಗ್ರಾಮದ ಮುನಿರಾಜು ಸಮ್ಮುಖದಲ್ಲಿ ಇತರೆ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

 

The Daily News Media

The Daily News Media